ಅಕ್ಷರ ಸಂತ ಹರೇಕಳ‌ ಹಾಜಬ್ಬರಿಗೆ ಬೆಸ್ಟ್ ಫ್ರೆಂಡ್ಸ್ ಚಾರಿಟಿ ವತಿಯಿಂದ ಸನ್ಮಾನ

0
196

ಮಂಗಳೂರು: ರೋಗಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕೆಲವು ಜೀವದ ಗೆಳೆಯರು ಸೇರಿ ತೊಡಗಿಸಿಕೊಂಡಿರುವ ಬೆಸ್ಟ್ ಫ್ರೆಂಡ್ಸ್ ಚಾರಿಟಿ ಗ್ರೂಪ್ ಮಂಗಳೂರು ಇದರ ಗಣರಾಜ್ಯೋತ್ಸವದ ಆಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಇದರ ಅಂಗವಾಗಿ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಸನ್ಮಾನ್ಯ ಹರೇಕಳ ಹಾಜಬ್ಬರಿಗೆ ಸದಸ್ಯರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬರವರು ಮಾತನಾಡಿ, ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು. ಕಿತ್ತಳೆ ಬುಟ್ಟಿ ಹೊತ್ತು ಅದರಿಂದ ಬಂದ ಹಣದಲ್ಲಿ ಬಹಳ ಕಷ್ಟಪಟ್ಟು ಊರಿನ ಬಡವರಿಗೆ ಕಲಿಯಲು ಶಾಲೆ ಕಟ್ಟುವ ಮೂಲಕ ಮಹತ್ವದ ಕೊಡುಗೆಯನ್ನುನೀಡಿದ ಸನ್ಮಾನ್ಯ ಹಾಜಬ್ಬರಿಗೆ ಪದಾಧಿಕಾರಿಗಳು ಮತ್ತು ಸದಸ್ಯರ ಸಮ್ಮುಖದಲ್ಲಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮತ್ತು ಅವರ ವೈಯಕ್ತಿಕ ಖರ್ಚಿಗೆ ಧನಸಹಾಯವನ್ನು ನೀಡಲಾಯಿತು.

ಅಧ್ಯಕ್ಷರಾದ ಮುಸ್ತಫಾ ಕುಕ್ಕಾಜೆ, ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್, ಸದಸ್ಯರಾದ ಹನೀಫ್ ವಿಷನ್ ಪ್ರಿಂಟರ್ಸ್, ಅಡ್ಮಿನ್ ಶಕೀಲ್ ಅಹ್ಮದ್,ರಶೀದ್ ಕೃಷ್ಣಾಪುರ, ಹಕೀಮ್ ಪ್ರಿಂಟೆಕ್, ಆರಿಫ್ ವಾಮಂಜೂರ್, ಅಬ್ದುಲ್ ನಝೀರ್ ಹಾಗೂ ಇತರರು ಉಪಸ್ಥಿತರಿದ್ದರು.