ಆನಂದ್ ಸಿಂಗ್ ರಾಜೀನಾಮೆ ವಿಚಾರ ಕೇವಲ ಊಹಾಪೋಹ : ಸಿಎಂ ಬೊಮ್ಮಾಯಿ

0
181

ಬೆಂಗಳೂರು : ಸಚಿವ ಸ್ಥಾನಕ್ಕೆ ಆನಂದ್ ಸಿಂಗ್ ಅವರು ರಾಜೀನಾಮೆ ನೀಡಲಿದ್ದಾರೆ ಎನ್ನುವುದು ಕೇವಲ ಊಹಾಪೋಹ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ್ ಸಿಂಗ್ ಜೊತೆಗೆ ಮಾತನಾಡಿದ್ದೇನೆ. ಇಂದು ಕೂಡ ಮಾತನಾಡುತ್ತೇನೆ. ಅವರ ಅನುಕೂಲ ನೋಡಿಕೊಂಡು ಬರುತ್ತಾರೆ. ಅವರ ಜೊತೆಗೆ ಚರ್ಚೆ ನಡೆಸುತ್ತೆನೆ. ಆನಂದ್ ಸಿಂಗ್ ಮತ್ತು ನಾನು ಮೂರು ದಶಕಗಳ ಗೆಳೆಯರು. ರಾಜೀನಾಮೆ ನೀಡಿದ್ದಾರೆ ಎನ್ನುವುದು ಊಹಾಪೋಹ ಎಂದರು. ಆನಂದ್ ಸಿಂಗ್ ರಾಜೀನಾಮೆ ಕುರಿತ ಯಾವುದೇ ಚರ್ಚೆ ನಡೆದಿಲ್ಲ. ಬರೀ ಮಾತುಕತೆ ನಡೆದಿದೆ ಅಷ್ಟೇ. ಅವರುಉ ಯಾವುದೇ ದಾರಿ ಹಿಡಿಯಲ್ಲ. ಅಂತಿಮವಾಗಿ ಎಲ್ಲವೂ ಸರಿಯಾಗಲಿದೆ ಎಂದು ಹೇಳಿದ್ದಾರೆ.