ಉಪ್ಪಿನಂಗಡಿ: ವಾರದ ಹಿಂದೆಯಷ್ಟೇ ವಿವಾಹವಾಗಿದ್ದ ಯುವಕ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

0
222

ಉಪ್ಪಿನಂಗಡಿ (06-10-2021): ಉಪ್ಪಿನಂಗಡಿಯಲ್ಲಿ ನವವಿಹಾಹಿತ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುದ್ರಡ್ಕ ಎಂಬಲ್ಲಿ ನಡೆದಿದೆ.

ನಾಸೀರ್ (27) ಮೃತ ಯುವಕ. ಯುವಕನ ಮೃತದೇಹ ಕುದ್ರಡ್ಕ ಕಲ್ಲಿನ ಕೋರೆ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳೆದ ಆದಿತ್ಯವಾರವಷ್ಟೇ ನಾಸೀರ್ ಗೆ ವಿವಾಹವಾಗಿತ್ತು. ಸ್ಥಳಕ್ಕೆ ಪೂಂಜಾಲಕಟ್ಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನವವಿವಾಹಿತನ ಮೃತದೇಹ ಪತ್ತೆ ಬೆನ್ನಲ್ಲೇ ಕೊಲೆಯೇ? ಆತ್ಮಹತ್ಯೆಯೋ ಎಂಬ ಶಂಕೆ ವ್ಯಕ್ತವಾಗಿದೆ.