ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ವತಿಯಿಂದ ಸ್ವಾತಂತ್ರ್ಯೊತ್ಸವ ಪ್ರಯುಕ್ತ ರಕ್ತದಾನ ಶಿಬಿರ

0
238

ವಿಟ್ಲ:ಎಸ್ಸೆಸ್ಸೆಪ್ ವಿಟ್ಲ ಡಿವಿಷನ್ ವತಿಯಿಂದ 75 ನೇ ಸ್ವಾತಂತ್ರ್ಯೊತ್ಸವದ ಪ್ರಯುಕ್ತ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಹಾಗೂ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇದರ ಸಹಬಾಗಿತ್ವದಲ್ಲಿ ಎಸ್ಸೆಸ್ಸೆಪ್ ಬ್ಲಡ್ ಸೈಬೊ ಕರ್ನಾಟಕ ಇದರ ಬೃಹತ್ ರಕ್ತದಾನ ಶಿಬಿರವು ವಿಟ್ಲ ಅಶ್ಅರಿಯಾ ಟೌನ್ ಮಸ್ಜಿದ್ ಸಮೀಪ ನಡೆಯಿತು. ಹಲವು ಮಂದಿ ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಮಾದರಿಯಾದರು.


ಡಿವಿಷನ್ ಕಾರ್ಯದರ್ಶಿ ಹಸನ್ ಸಅದಿ ಕುಕ್ಕಿಲ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಅಬ್ದುರ್ರಹ್ಮಾನ್ ಸಅದಿ ವಿಟ್ಲ ರವರು ದುಆದ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಅಬೂಬಕರ್ ಸುನ್ನೀ ಫೈಝಿ ಪೆರುವಾಯಿ, ಕೆಸಿಎಫ್ ನಾಯಕರಾದ ಇಬ್ರಾಹಿಂ ಹಾಜಿ ಬ್ರೈಟ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಂ.ಎಸ್ ಮುಹಮ್ಮದ್, ಅಬೂಬಕ್ಕರ್ ಅನಿಲಕಟ್ಟೆ, ಹಮೀದ್ ಹಾಜಿ ಕೊಡಂಗಾಯಿ, ದ.ಕ ಜಿಲ್ಲಾ ಈಸ್ಟ್ ಬ್ಲಡ್ ಕೋಅರ್ಡಿನೇಟರ್ ಇಮ್ರಾನ್ ರೆಂಜಲಾಡಿ, ಟೌನ್ ಮಸ್ಜಿದ್ ಇಮಾಂ ಅಬ್ಬಾಸ್ ಮದನಿ, ಇಸ್ಮಾಯಿಲ್ ಮಾಸ್ಟರ್ ಮಂಗಳಪದವು, ಹಕೀಂ ಶಾಂತಿನಗರ, ರಹೀಂ ಸಖಾಫಿ ವಿಟ್ಲ, ಹಾಜಿ ರಝ್ಝಾಕ್ ಸಖಾಫಿ ಕೆಲಿಂಜ, ಅಬ್ದುರ್ರಹ್ಮಾನ್ ಶರಫಿ ಮೂಡಂಬೈಲು, ಅಶ್ರಫ್ ಸಖಾಫಿ ಕನ್ಯಾನ, ಇಬ್ರಾಹಿಂ ಮುಸ್ಲಿಯಾರ್, ಕಾದರ್ ಸಅದಿ ಕನ್ಯಾನ, ಸಲೀಂ ಹಾಜಿ ಬೈರಿಕಟ್ಟೆ, ಮುಸ್ತಫಾ ಕೋಡಪದವು, ಸತ್ತಾರ್ ಶಾಂತಿನಗರ, ರಝಾಕ್ ಪೆಲ್ತಡ್ಕ, ಅಬ್ದುಲ್ ಕಾದರ್ ಕೊಡುಂಗಾಯಿ, ರಝಾಕ್ ಬೈರಿಕಟ್ಟೆ ಜಲೀಲ್ ಒಕ್ಕೆತ್ತೂರು, ಕೆಸಿಎಫ್ ನಾಯಕರಾದ ಅಶ್ರಫ್ ಅಳಿಕೆ, ಶಾಹುಲ್ ಕೊಳಂಬೆ ಹಾಗೂ ಖಲಂದರ್ ಕಬಕ ಮುಂತಾದವರು ಉಪಸ್ಥಿತರಿದ್ದರು.

ಎಸ್ಸೆಸ್ಸೆಪ್ ವಿಟ್ಲ ಡಿವಿಷನ್ ಕಾರ್ಯದರ್ಶಿ ಹಕೀಂ ಮುಸ್ಲಿಯಾರ್ ನೆಲ್ಲಿಗುಡ್ಡೆ ಸ್ವಾಗತಿಸಿದರು, ಡಿವಿಷನ್ ಬ್ಲಡ್ ಸೈಬೊ ಕೋರ್ಡಿನೇಟರ್ ಜಹಾಝ್ ಅಳಿಕೆ ಕಾರ್ಯ ಕ್ರಮ ನಿರ್ವಹಿಸಿದರು.