ಕಲ್ಲುಗುಂಡಿಯಲ್ಲಿ SKSSF ನೂತನ ಕಛೇರಿ ಉದ್ಘಾಟನೆ

0
150

ಸುಳ್ಯ : ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಎಸ್ ಕೆ ಎಸ್ ಎಸ್ ಎಫ್ ಶಾಖೆಯ ಕಛೇರಿಯನ್ನು ಜ.2 ರಂದು ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಇದರ ಸ್ಥಾಪಕಾಧ್ಯಕ್ಷರಾದ ಟಿ.ಎಂ.ಶಹೀದ್ ತೆಕ್ಕಿಲ್ ಅವರು ಉದ್ಘಾಟಿಸಿದರು. ನಂತರ ಅವರು ಮಾತನಾಡಿ ಎಸ್ ಕೆ ಎಸ್ ಎಸ್ ಎಫ್ ನ ಧ್ಯೇಯ ವಾಕ್ಯವೇ ವಿನಯ ವಿಜ್ಞಾನ ಸೇವೆ, ಅದರಂತೆ ನಾವು ಸೇವೆ ಸಲ್ಲಿಸಿದಾಗ ಮಾತ್ರ ಜನ ನಮ್ಮನ್ನು ಗುರುತಿಸುತ್ತಾರೆ. ನಾವು ನಮ್ಮ ವೈಯಕ್ತಿಕ ಬೆಳವಣಿಗೆಗಾಗಿ ಕೆಲಸ ಮಾಡದೆ ಸಂಸ್ಥೆಯ ಬೆಳವಣಿಗೆಗಾಗಿ ಕೆಲಸ ಮಾಡ ಬೇಕೆಂದರು. ಬೇರೆ ದೇಶಗಳಿಗೆ ಹೋಲಿಸಿದರೆ ಮುಸಲ್ಮಾನರಿಗೆ ಜೀವಿಸಲು ಭಾರತ ಉತ್ತಮವಾದ ದೇಶ. ಆದುದರಿಂದ ಇಲ್ಲಿ ಪರಧರ್ಮ ಸಹಿಷ್ಣುತೆಯೊಂದಿಗೆ ಜಾತ್ಯಾತೀತವಾಗಿ ಕೋಮು ಸೌಹಾರ್ಧತೆಯೊಂದಿಗೆ ಜೀವಿಸುತ್ತಿದ್ದೇವೆ. ನಮ್ಮ ಯುವಕರು ಸಮಸ್ತ ನೇತಾರರ ಆದರ್ಶ ಮತ್ತು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕೆಂದರು.
ಸಮಾರoಭದ ಅಧ್ಯಕ್ಷತೆಯನ್ನು ಕಲ್ಲುಗುಂಡಿ ಎಸ್ ಕೆ ಎಸ್ ಎಸ್ ಎಫ್ ಶಾಖೆಯ ಅಧ್ಯಕ್ಷ ರಿಯಾಝ್ ಕಲ್ಲುಗುಂಡಿ ವಹಿಸಿದರು. ಸುಳ್ಯ ತಾಲೂಕು ಮದರಸ ಮ್ಯಾನೇಜ್ ಮೆಂಟ್‌ನ ಕೋಶಾಧಿಕಾರಿ ಹಮೀದ್ ಹಾಜಿ ಬಿಳಿಯಾರು ದುವಾ ನೆರವೇರಿಸಿದರು. ಅತಿಥಿಗಳಾಗಿ ಪೇರಡ್ಕ ಮುಹಿದ್ಧೀನ್ ಜುಮ್ಮಾ ಮಸೀದಿ ಖತೀಬರಾದ ರಿಯಾಝ್ ಫೈಝಿ ಎಮ್ಮೆಮಾಡು, ಕಲ್ಲುಗುಂಡಿ ಮುಹಿದ್ಧೀನ್ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಎಚ್.ಎ. ಅಬ್ಬಾಸ್ ಬಾಲೆಂಬಿ, ಪೇರಡ್ಕ ಮುಹಿದ್ಧೀನ್ ಜುಮ್ಮಾ ಮಸೀದಿ ಅಧ್ಯಕ್ಷ ಆಲಿಹಾಜಿ, ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ, ಅಹ್ಮದ್ ಪಾರೆ, ಅಹಮ್ಮದ್ ಸುಪ್ರೀಮ್ ಸುಳ್ಯ, ಅಕ್ಬರ್ ಕರಾವಳಿ, ಪುತ್ತುಚ್ಚ ಸುಳ್ಯ, ಗ್ರಾ.ಪಂ. ಸದಸ್ಯ ಎಸ್. ಕೆ. ಹನೀಫ್ ಸಂಪಾಜೆ . ವೇದಿಕೆಯಲ್ಲಿ ಉಪಸ್ಥಿತರಿದ್ದರು . ಕಲ್ಲುಗುಂಡಿ ಎಸ್ಕಎಸ್ಎಸ್ ಎಫ್ ಶಾಖೆಯ ಉಪಾಧ್ಯಕ್ಷ ಜೈನುದ್ದೀನ್ ಯಮಾನಿ, ಕೆ. ಎಂ. ರಫೀಕ್, ಮುನೀರ್ ದಾರಿಮಿ ಗೂನಡ್ಕ ಹಸೈನಾರ್ ಗುಡ್ಡೆ, ಆಮು ಕರಾವಳಿ, ಪಿ.ಎ. ಆಮು ಬಾಲೆಂಬಿ ಮೊದಲಾದವರಿದ್ದರು. ಸುಳ್ಯ ತಾಲೂಕು ಮದರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ತಾಜ್ ಮಹ್ಮದ್ ಸಂಪಾಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಜಾಕ್ ಸೂಪರ್ ವಂದಿಸಿದರು. ಸಮಾರಂಭದ ನಂತರ ಝೈನುದ್ಧೀನ್ ಯಮಾನಿ ಅವರ ನೇತೃತ್ವದಲ್ಲಿ ಮಜಿಲೀಸ್ ನ್ನೂರ್ ನಡಿಯಿತು.