ಕಾಂಗ್ರೆಸ್ ಬೂತ್ ಸಮಿತಿ ಅರ್ಕುಳ ವಾರ್ಡ್ 4 ವಳಚ್ಚಿಲ್ ಪದವು ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

0
196

ಮಂಗಳೂರು : ಕಾಂಗ್ರೆಸ್ ಬೂತ್ ಸಮಿತಿ ಅರ್ಕುಳ ವಾರ್ಡ್ 4 ವಳಚ್ಚಿಲ್ ಪದವು ವತಿಯಿಂದ ಲೈಫ್ ಲೈನ್ ಕಣ್ಣೂರ್ ಪಾಲಿ ಕ್ಲಿನಿಕ್ ಮತ್ತು ಲೈಫ್ ಲೈನ್ ಹೆಲ್ತ್ ಕೇರ್ ಬಿಸಿ ರೋಡ್ ಇವರ ಸಹ ಬಾಗಿತ್ವದಲ್ಲಿ ಬೃಹತ್ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವು ಡಿಸಂಬರ್ 5 ಆದಿತ್ಯವಾರ ಹಯಾತುಲ್ ಇಸ್ಲಾಂ ಮದ್ರಸ ಸಭಾಂಗಣ ವಳಚ್ಚಿಲ್ ಪದವು ಮತ್ತು ನವಜ್ಯೋತಿ ನಗರ ಕಮ್ಯುನಿಟಿ ಹಾಲ್ ವಳಚ್ಚಿಲ್ ಪದವಿನಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮೋಹಿದೀನ್ ಭಾವ ಮಾಜಿ ಶಾಸಕರು ಮಂಗಳೂರು ಉತ್ತರ ವಿಧಾನ ಸಭಾ ಕ್ಷೆತ್ರ ಇವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸುರೇಂದ್ರ ಕಂಬಳಿ ಗುರುಪುರ ಬ್ಲಾಕ್ ಅಧ್ಯಕ್ಷರು, ಶ್ರೀಮತಿ ಝಿನತ್ ಅಧ್ಯಕ್ಷರು ಅಡ್ಯಾರ್ ಗ್ರಾಮ ಪಂಚಾಯತ್ ಎ. ಕೆ. ಅಬ್ದುಲ್ ಸತ್ತಾರ್ ಮಾಜಿ ಅಧ್ಯಯಕ್ಷರು ಅಡ್ಯಾರ್ ಗ್ರಾಮ ಪಂಚಾಯತ್, ದವೂದ್ ಐಫ್ಫಾ ಅಧ್ಯಕ್ಷರು ಅಲ್ ಬದ್ರಿಯಾ ಜುಮ್ಮಾ ಮಸೀದಿ ವಳಚ್ಚಿಲ್ ಪದವು ಮತ್ತು ಅಧ್ಯಕ್ಷರು SKSSF ವಳಚ್ಚಿಲ್ ಶಾಖೆ, ನಝೀರ್ ವಳಚ್ಚಿಲ್ ಸ್ವಾಗತಿಸಿ ವಂದಿಸಿದರು

ಶಿಬಿರದಲ್ಲಿ ಹತ್ತಕ್ಕೂ ಹೆಚ್ಚಿನ ಮಂಗಳೂರು ಮತ್ತು ಬಿಸಿರೋಡಿನ ನುರಿತ ವೈದ್ಯರು ಗಳಾದ ಡಾ ಯುನುಸ್ ಸಲೀಮ್, ಡಾ ರಿಫಾತ್ ಅಬ್ದುಲ್ ಹಝಿಝ್, ಡಾ ಸಫ್ವಾನ್ ಜಿ ಎಂ, ವಿದ್ಯಾ ಅರವಿಂದ್, ಶುಭ ದನ್ ಪ್ರಕಾಶ್, ಸಾರಾ ನೌಶಾದ್, ಡಾ ಸರಿತಾ ಲೋಬೊ, ಡಾ ದಿವ್ಯ ದಾಮೋದರ್, ಡಾ ಶರತ್ ಬಾಬು ಎಸ್, ಡಾ ಮೊಹಮ್ಮದ್ ಮುಬಶೀರ್ ಮೊದಲಾದ ವೈದ್ಯರು ಉಚಿತ ಸೇವೆ ನೀಡಿದರು.