ಗಲಾಟೆ ಬಿಡಿಸಲು ಹೋದವರ ಮೇಲೆ ಸುಮೊಟೋ ಕೇಸು ದಾಖಲು – ಸೋಶಿಯಲ್ ಇಖ್ವಾ ಫೆಡರೇಶನ್ ಖಂಡನೆ

0
231

ಬಂಟ್ವಾಳ : ಮಾಣಿಯಲ್ಲಿ ಇತ್ತೀಚಿಗೆ ಗುಂಪು ಘರ್ಷಣೆ ಪ್ರಕರಣದಲ್ಲಿ ಗಲಾಟೆ ಬಿಡಿಸಲು ಹೋದ ನಮ್ಮ ಸಂಘಟನೆಯ ಆರೋಗ್ಯ ಕಾರ್ಯದರ್ಶಿಯವರಾದ ಹನೀಫ್ ಸೂರಿಕುಮೇರು ಎಂಬವರನ್ನು ಪೋಲಿಸರು ಸುಮೊಟೋ ಕೇಸು ದಾಖಲಿಸಿ ಬಂಧಿಸಿರುತ್ತಾರೆ.ಸಮಾಜಮುಖಿ ಕಾರ್ಯಗಳಲ್ಲಿ ಸದಾ ಗುರುತಿಸಿಕೊಂಡಿರುವ ಹನೀಫ್ ಸೂರಿಕುಮೇರ್ ರವರನ್ನು ಯಾರದೋ ಒತ್ತಡಕ್ಕೆ ಮಣಿದು ಬಂಧಿಸಿರುವ ಪೋಲಿಸ್ ನಡೆಯನ್ನು ಸೋಶಿಯಲ್ ಇಖ್ವಾ ಫೆಡರೇಶನ್ ತೀವ್ರವಾಗಿ ಖಂಡಿಸುತ್ತದೆ.ಪೋಲಿಸ್ ಮೇಲಾಧಿಕಾರಿಗಳು ಘಟನೆಯ ವಿಡೀಯೋಗಳನ್ನು ಮರು ಪರಿಶೀಲಿಸಬೇಕು ಮತ್ತು ಗಲಭೆ ನಡೆಸಿ ಪೋಲಿಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ನೈಜ ಆರೋಪಿಗಳನ್ನು ಬಂಧಿಸಿ ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಈ ಮೂಲಕ ಆಗ್ರಹಿಸಿದೆ.