ಗುರುಕುಲ ಕಲಾ ಪ್ರತಿಷ್ಠಾನ; ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಪರ್ವ

0
162

ಮಂಗಳೂರು: ಗುರುಕುಲ ಕಲಾ ಪ್ರತಿಷ್ಠಾನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಪರ್ವ ಹಾಗೂ ಕವಿಗೋಷ್ಠಿ ಕಂಕನಾಡಿಯ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಂಭಾಗಣದಲ್ಲಿ ನಡೆಯಿತು.

ಜಿಲ್ಲಾ ಘಟಕದ ಅಧ್ಯಕ್ಷೆ ಮಾನಸ ವಿಜಯ್ ಕೈಂತಜೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಉದ್ಘಾಟಿಸಿದರು.

ಸಂಸ್ಥಾಪಕ ರಾಜ್ಯಧ್ಯಕ್ಷ ಹುಲಿಯೂದುರ್ಗ ಲಕ್ಷೀನಾರಾಯಣ್, ಸಂಸ್ಥಾಪಕ ಕಾರ್ಯಾಧ್ಯಕ್ಷ ಡಾ. ಶಿವರಾಜ್ ಗೌಡ, ಸಯ್ಯಿದ್ ಹಬೀಬುಲ್ಲಾ‌ ತಂಙಳ್, ಜೀನತ್ ಉನ್ನಿಸಾ ಚಿಕ್ಕಬಳ್ಳಾಪುರ, ಪರಂ ಗುಬ್ಬಿ, ಸುಚಿತ್ರ ಸಿ, ನಂದೀಶ್ ಉಪಸ್ಥಿತರಿದ್ದರು.

ಹಿರಿಯ ಸಾಹಿತಿ ಸಾಲೆತ್ತೂರು ಫೈಝಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದರು. ಗುರುಕುಲ ಕಲಾ ಪ್ರತಿಷ್ಠಾನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಿ.ಐ. ಅಬೂಬಕರ್ ಕೈರಂಗಳ ಸ್ವಾಗತಿಸಿದರು. ಉದಯರವಿ ಶೆಟ್ಟಿ ವಂದಿಸಿದರು.