ಜಮಖಂಡಿಯಲ್ಲಿ ಕ್ಯಾಂಪಸ್ ಫ್ರಂಟ್ ರಾಜ್ಯ ಸದಸ್ಯತ್ವ ಅಭಿಯಾನದ ಉದ್ಘಾಟನೆ – ಕಾರ್ಯಕ್ರಮಕ್ಕೆ ಪೊಲೀಸ್ ಅಡ್ಡಿ

0
226

ಬಾಗಲಕೋಟೆ : ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ವತಿಯಿಂದ ” ಒಗ್ಗಟ್ಟಿನಲ್ಲಿ ಬಲವರ್ಧನೆ , ಭಿನ್ನ ಧ್ವನಿಯ ರಕ್ಷಣೆ” ಎಂಬ ಘೋಷಾ ವಾಕ್ಯದಡಿ ರಾಜ್ಯ ಸದಸ್ಯತ್ವ ಅಭಿಯಾನದ ಉದ್ಘಾಟನಾ ಕಾರ್ಯಕ್ರಮವು ಬಾಗಲಕೋಟೆಯ ಜಮಖಂಡಿಯಲ್ಲಿ ನಡೆಯಿತು.ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಸಾದಿಕ್ ಹಾಗು ಅಲ್ತಾಫ್ ಹೊಸಪೇಟೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ಕ್ಯಾಂಪಸ್ ಫ್ರಂಟ್ ಸದಸ್ಯತ್ವ ಕೂಪನ್ ಪಡೆಯುವ ಮೂಲಕ ಸಂಘಟನೆಗೆ ಸೇರಿದರು.ಆದರೆ ಕಾನೂನು ಬದ್ಧವಾಗಿ ನಡೆಸುತ್ತಿದ್ದ ಕಾರ್ಯಕ್ರಮದ ಮೇಲೆ ಜಮಖಂಡಿ ಪೊಲೀಸರು ಅಕ್ರಮವಾಗಿ ನುಗ್ಗಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಬಂಧಿಸಲಾಯಿತು. ಪೋಲಿಸರ ಈ ನಡೆಯನ್ನು ತೀವ್ರವಾಗಿ ಖಂಡಿಸಿ ಕಾನೂನು ಹೋರಾಟ ನಡೆಸುತ್ತೇವೆಂದು ರಾಜ್ಯಾಧ್ಯಕ್ಷರಾದ ಅಥಾವುಲ್ಲ ಪುಂಜಾಲಕಟ್ಟೆ ತಿಳಿಸಿದ್ದಾರೆ.