ಟ್ವೆಕಾಂಡೋ ಚಾಂಪಿಯನ್ ಶಿಪ್ಪಿನಲ್ಲಿ ದ.ಕ. ಜಿಲ್ಲೆಯ ಟ್ವೆಕಾಂಡೋ ಪಟುಗಳಿಗೆ ಚಿನ್ನ-ಬೆಳ್ಳಿ – ಕಂಚು ಸಹಿತ 9 ಪದಕಗಳನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ

0
202

ಬೆಂಗಳೂರು : ಕರ್ನಾಟಕ ಟೇಕ್ವಾಂಡೋ ಅಕಾಡೆಮಿ ವತಿಯಿಂದ ಇತ್ತಿಚೆಗೆ ನಗರದ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 1st ರಾಜ್ಯ ಓಪನ್ ಟೆಕ್ವಾಂಡೋ ಚಾಂಪಿಯನ್ ಶಿಪ್-2021 ಕ್ರೀಡಾಕೂಟದಲ್ಲಿ ಕ್ಯೊರೊಗಿ (ಫೈಟಿಂಗ್),ಮತ್ತು ಪೊಂಸೆ ಹಾಗೂ ಅಯಾ ವಯಸ್ಸಿನ ವಲಯ ಮಿತಿ ವಿಭಾಗ ದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡದಿಂದ ಪ್ರತಿನಿಧಿಸಿದ ದಕ್ಷಿಣ ಕನ್ನಡ ಕ್ರಿಡಾ ಪಟುಗಳು 6ಚಿನ್ನ , 2ಬೆಳ್ಳಿ , 1ಕಂಚು ಪದಕಗಳನ್ನು ಪಡೆದು ಊಟಿ ರಾಷ್ಟ ಮಟ್ಟಕ್ಕೆ ಟೇಕ್ವಾಂಡೋ ಚ್ಯಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾರೆ.

8 ವರ್ಷ ಅಡಿಯ ಫೈಟಿಂಗ್ ವಿಭಾಗದಲ್ಲಿ ಮುಹಮ್ಮದ್ ರಾಹಿಪ್ ಚಿನ್ನ , ಹಾಗೂ ಮುಹಮ್ಮದ್ ರಿಹಾಮ್ ಘನಿ ಪೊಂಸೆ ವಿಭಾಗ ದಲ್ಲಿ ಕಂಚಿನ ಪದಕ ಹಾಗೂ 10 ವರ್ಷ ಅಡಿಯ ಫೈಟಿಂಗ್ ವಿಭಾಗದಲ್ಲಿ ಮುಹಮ್ಮದ್ ಮುಸ್ತಫಾ ಚಿನ್ನ , 12 ವರ್ಷ ಅಡಿಯ ಫೈಟಿಂಗ್ ವಿಭಾಗದಲ್ಲಿ ಮುಹಮ್ಮದ್ ಪೈಝಲ್ ಚಿನ್ನ , ಹಾಗೂ ಪೊಂಸೆ ವಿಭಾಗ ದಲ್ಲಿ ಮುಹಮ್ಮದ್ ಮಿಶಾಲ್ ಚಿನ್ನ , 14 ವರ್ಷವಯಮಿತಿ 55ಕೆಜಿ ವಲ ಪಟ್ಟ ವಿಭಾಗದಲ್ಲಿ ಮುಹಮ್ಮದ್ ಅಯಾನ್ ಚಿನ್ನ , 45ಕೆಜಿ ವಲಪಟ್ಟ ವಿಭಾಗದಲ್ಲಿ ಮುಹಮ್ಮದ್ ನಿಹಲ್ ನಝೀರ್ ಚಿನ್ನ , ಹಾಗೂ 15 ವರ್ಷ ಮೇಲ್ಪಟ್ಟ ವಯಸ್ಸಿನ ವಿಭಾಗದ 18 ವರ್ಷ ವಯಮಿತಿ ಯಲ್ಲಿ ಮುಹಮ್ಮದ್ ಶಿರ್ಹಾಣ್ ಬೆಳ್ಳಿ ಪದಕ ‌. ಹಾಗೂ 20 ವರ್ಷ ವಯಮಿತಿ ಯಲ್ಲಿ ಮುಹಮ್ಮದ್ ಶಹಬನ್ ಬೆಳ್ಳಿ ಪದಕ ಗಳನ್ನು ಪಡೆದು ಮುಂಬರುವ ಜನವರಿ ತಿಂಗಳ 7 , 8- 2022 ಊಟಿ ರಾಷ್ಟ್ರ ಮಟ್ಟದ ಟೇಕ್ವಾಂಡೋ ಚ್ಯಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾರೆ.

ಇವರು ದಕ್ಷಿಣ ಕನ್ನಡ ಜಿಲ್ಲೆಯ ಟ್ವೆಕಾಂಡೋ ತರಬೇತಿ ಕೇಂದ್ರಗಳಾಗಿರುವ ಪಾಣೆಮಂಗಳೂರಿನ ಫಿಟ್ಟೆಸ್ ಮಲ್ಟಿ ಜಿಂ ಮತ್ತು ಮಾರ್ಷಲ್ ಆಟ್ರ್ಸ್ ಸೆಂಟರ್ ಹಾಗೂ ಎಕ್ಸ್ಟ್ರೀಂ ಫೈಟ್ ಕ್ಲಬ್ ಸುರತ್ಕಲ್ ಕೇಂದ್ರದಲ್ಲಿ ಟ್ವೆಕಾಂಡೋ ತರಬೇತಿಯನ್ನು ಪಡೆದಿದ್ದು, ಜಿಲ್ಲಾ ಮುಖ್ಯ ಟ್ವೆಕಾಂಡೋ ತರಬೇತುದಾರ ಇಸಾಕ್ ಇಸ್ಮಾಯಿಲ್ ನಂದಾವರ ಹಾಗೂ ಸಹಾಯಕ ತರಬೇತುದಾರ ಶಹಬನ್ ಟಿ ಕೆ ಡಿ ಕುಳಾಯಿ ಅವರು ತರಬೇತಿ ನೀಡಿ ಸಜ್ಜುಗೊಳಿಸಿದ್ದರು.

Mohammed Rahif gold Medal 🥇 in fighting
Mohammed Rihan bronze medal in Poomsa
Mohammad Mishal Mansoor Gold medal in Poomsa
Mohammed Musthafa gold Medal in Fighting
Mohammed Faizal gold Medal in fighting
Mohammed nihal Nazeer gold Medal in Fighting
Mohammed Ayaan gold medal in fighting
Mohammed SIRHAN silver medal in fighting
Mohammed Shaban silver medal in fighting