ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ; ವಿವೇಕ್ ರಾಜ್ ಪೂಜಾರಿ ಖಂಡನೆ

0
192

ಮಂಗಳೂರು: ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಕೇಂದ್ರ ಸರಕಾರ ಅವಕಾಶ ನಿರಾಕರಿಸಿರುವುದನ್ನು ಕಾಂಗ್ರೆಸ್ ಮುಖಂಡ ವಿವೇಕ್ ರಾಜ್ ಪೂಜಾರಿ ತೀವ್ರವಾಗಿ ಖಂಡಿಸಿದ್ದಾರೆ.

ಮಾನವೀಯ ಮೌಲ್ಯಗಳನ್ನು ನಾಡಿಗೆ ಸಾರಿದ ಮಹಾನ್ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಕೇಂದ್ರ ಬಿಜೆಪಿ ಸರಕಾರ ಅವಮಾನ ಮಾಡಿದೆ. ಕೇಂದ್ರ ಸರಕಾರ ದೇಶದ ಕ್ಷಮೆ ಕೇಳಬೇಕು ಹಾಗೂ ನಾರಾಯಣ ಗುರುಗಳ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ವಿವೇಕ್ ರಾಜ್ ಪೂಜಾರಿ ಆಗ್ರಹಿಸಿದರು.