ನಿಸ್ವಾರ್ಥ ಸೇವೆಗೆ ದುನಿಯಾದಲ್ಲಿ ಅಲ್ಲಾಹನಿಂದ ಅನುಗ್ರಹಗಳು ಇಷ್ಟಿದ್ದರೆ? ಆಖಿರತ್ತಿನಲ್ಲಿ ಇನ್ನೆಷ್ಟಿರಬಹುದು?

0
192

✒️ ರಫೀಕ್ ಮಾಸ್ಟರ್

ಘಟನೆ 1

ಸುಡಾನಿನ ಅಲ್ ತಯ್ಯೂಬ್ ಯೂಸುಫ್ ಸೌದಿಯ ನಿರ್ಜನ ಮರಳುಗಾಡಿನಲ್ಲಿ ಕುರಿ ಮೇಯಿಸುವವರು. ಒಂದು ದಿನ ಕೆಲವು ಜನರ ಗುಂಪೊಂದು ಬಂದು
ಕುರಿ ಮಂದೆಯಲ್ಲಿರುವ ನೂರಾರು ಕುರಿಗಳ ಪೈಕಿ ಕುರಿಯೊಂದನ್ನು ಕ್ರಯಕ್ಕೆ ಕೇಳುತ್ತಾರೆ. ಆಗ ಅವರು ಯಜಮಾನನ ಅನುಮತಿಯಿಲ್ಲದೆ ಕುರಿಯನ್ನು ಕೊಡಲು ಸಾಧ್ಯವಿಲ್ಲ ಎನ್ನುತ್ತಾರೆ. ಇಷ್ಟೊಂದು ಸಂಖ್ಯೆಯ ಕುರಿಗಳಲ್ಲಿ ಒಂದು ಕುರಿಯನ್ನು ಕೊಟ್ಟರೆ ಯಜಮಾನನಿಗೆ ಹೇಗೆ ಗೊತ್ತಾಗುತ್ತದೆ ಎಂದು ಪ್ರಶ್ನೆ ಹಾಕುತ್ತಾರೆ ಹಾಗೂ ಆ ಒಂದು ಕುರಿಗೆ ಬಲು ದೊಡ್ಡ ಮೊತ್ತದ ಆಫರ್ ನೀಡುತ್ತಾರೆ.ಆಗ ಆ ಕುರಿಕಾಯುವ ಯೂಸುಫ್ ಹೇಳುತ್ತಾರೆ. “ಯಾರೂ ಇಲ್ಲದ ಈ ಮರುಭೂಮಿಯಲ್ಲಿ ಕುರಿಯೊಂದನ್ನು ಹಣಕ್ಕಾಗಿ ಮಾರಿದರೆ ಖಂಡಿತಾ ನನ್ನ ಯಜಮಾನನಿಗೆ ಗೊತ್ತಾಗಲ್ಲ. ಆದರೆ ನನ್ನನ್ನು ಅಲ್ಲಾಹನು ನೋಡುತ್ತಿದ್ದಾನೆ. ಯಜಮಾನನ ಕಣ್ಣನ್ನು ತಪ್ಪಿಸಿದರೂ ಅಲ್ಲಾಹನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನೀವು ನನಗೆ 200 ರಿಯಾಲ್ ಬಿಡಿ , 2 ಲಕ್ಷ ರಿಯಾಲ್ ಕೊಟ್ಟರೂ, ನನ್ನನ್ನು ಏನೂ ಮಾಡಿದರೂ ನಾನು ಒಂದು ಕುರಿ ಮರಿಯನ್ನು ಕೊಡಲಾರೆನು.”. ಗುಂಪಿನಲ್ಲಿದ್ದ ಓರ್ವ ವ್ಯಕ್ತಿ ಅವರ ಈ ಮಾತನ್ನು ವೀಡಿಯೋ ಮಾಡಿ ವೈರಲ್ ಮಾಡಿದರು. ಆ ವೀಡಿಯೋ ಸೌದಿ ರಾಜ ಮನೆತನಕ್ಕೆ ತಲುಪಿತು. ನಮ್ಮ ನಾಡಿನಲ್ಲಿ ಇಷ್ಟೊಂದು ಪ್ರಾಮಾಣಿಕ ಮತ್ತು ಅಲ್ಲಾಹನ ಮೇಲೆ ಭಯ ಭಕ್ತಿ ಇರುವ ವ್ಯಕ್ತಿ ಇರೋದು ನಮ್ಮ ನಾಡಿಗೆ ಗೌರವ ಎಂದು ಭಾವಿಸಿ ಅವರಿಗೆ 2 ಲಕ್ಷ ರಿಯಾಲ್ ನೀಡಿ ಸನ್ಮಾನಿಸಿದರು. ಸುಡಾನ್ ಸರಕಾರ ಸಹ ತಮ್ಮ ದೇಶಕ್ಕೆ ಕೀರ್ತಿ ತಂದ ಯೂಸುಫ್ ರವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿತು.

ಇಲ್ಲಿ ಆ ಸುಡಾನಿ ಕುರಿ ಮೇಯಿಸುವವನಿಗೆ ನನ್ನ ವೀಡಿಯೊ ಮಾಡುತ್ತಾರೆ. ಅದು ವೈರಲ್ ಆಗುತ್ತೆ. ಅದರಿಂದ ನನಗೆ ಕೀರ್ತಿ, ಪ್ರಶಸ್ತಿ,ಹಣ ಬರುತ್ತದೆ ಎಂಬ ಯಾವುದೇ ಆಲೋಚನೆ ಇರಲಿಲ್ಲ.ಅವರ ಮನಸ್ಸು ನಿಷ್ಕಲ್ಮಷವಾಗಿತ್ತು. ಹೃದಯ ನಿರ್ಮಲವಾಗಿತ್ತು. ಅವರಿಗೆ ಅಲ್ಲಾಹನು ದುನಿಯಾದಲ್ಲಿ ಕೊಟ್ಟ ಪ್ರತಿಫಲವನ್ನು ಒಮ್ಮೆ ಆಲೋಚನೆ ಮಾಡೋಣ.

ಘಟನೆ 2

ದುಬಾಯಿಯಲ್ಲಿ ಗರ್ಭಿಣಿ ಬೆಕ್ಕೊಂದು ಆಕಸ್ಮಿಕವಾಗಿ ಕಟ್ಟಡದ ಮೇಲಂತಸ್ತಿನಲ್ಲಿ ಸಿಕ್ಕಿಕೊಂಡಿತ್ತು. ಅದು ಇನ್ನೇನು ಕೆಳಗೆ ಜಿಗಿಯುತ್ತದೆ ಎನ್ನುವ ಸಂದರ್ಭದಲ್ಲಿ ಅಲ್ಲಿದ್ದ 4 ಮಂದಿ ಯುವಕರು ಬಟ್ಟೆಯೊಂದನ್ನು ಹಿಡಿದು ಆ ಗರ್ಭಿಣಿ ಬೆಕ್ಕನ್ನು ಕಾಪಾಡುತ್ತಾರೆ. ಸದರಿ ಕಾರ್ಯಾಚರಣೆಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತದೆ. ಆ ವೀಡಿಯೋ ಕಂಡ ದುಬಾಯಿಯ ಶೇಖ್ ಟ್ವಿಟರ್ ಮೂಲಕ ಅವರನ್ನು ಪ್ರಶಂಸಿಸುತ್ತಾರೆ, ಮಾತ್ರವಲ್ಲ ಆ 4 ಮಂದಿಗೆ ತಲಾ *ಹತ್ತು ಲಕ್ಷ ರೂಪಾಯಿಯಂತೆ ಒಟ್ಟು ನಲವತ್ತು ಲಕ್ಷ ಮೊತ್ತದ ಬಹುಮಾನವನ್ನು ನೀಡಿ ಅವರ ಮಾನವೀಯತೆಯನ್ನು, ಜೀವ ಕಾರುಣ್ಯವನ್ನು ಅಭಿನಂದಿಸುತ್ತಾರೆ.

ಇಲ್ಲೂ ಕೂಡ ಆ 4 ಮಂದಿ ಯುವಕರಿಗೆ ಆ ಬೆಕ್ಕಿನ ಪ್ರಾಣ ರಕ್ಷಣೆ ಯ ಉದ್ದೇಶವೇ ಹೊರತು ನಮ್ಮ ಈ ಕಾರ್ಯವನ್ನು ವೀಡಿಯೋ ಮಾಡಿ ವೈರಲ್ ಮಾಡುತ್ತಾರೆ. ಇದು ದುಬೈ ಶೇಖ್ ಗೆ ಗೊತ್ತಾಗುತ್ತದೆ. ಅವರು ನಮಗೆ ಇಷ್ಟು ದೊಡ್ಡ ಮೊತ್ತದ ಬಹುಮಾನವನ್ನು ಕೊಟ್ಟು ಗೌರವಿಸುತ್ತಾರೆ ಎಂದು ಅವರ ಮನಸ್ಸಿನ ಮೂಲೆಯಲ್ಲೂ ಕೂಡ ಆಲೋಚನೆ ಇರಲಿಲ್ಲ. ಆದರೆ ಅಲ್ಲಾಹನು ಅವರ ನಿಸ್ವಾರ್ಥ ಕಿರು ಸೇವೆಗೆ ಎಷ್ಟೊಂದು ದೊಡ್ಡ ಪ್ರತಿಫಲ ಕೊಟ್ಟನಲ್ಲವೇ?

ಘಟನೆ 3

ಕೇರಳದಲ್ಲಿ ಭೀಕರ ಪ್ರವಾಹಕ್ಕೆ ತುತ್ತಾಗಿ ಅಪಾರ ಸಾವು ನೋವು ಸಂಭವಿಸಿತ್ತು. ಒಂದೆಡೆ ನೆರೆಯಲ್ಲಿ ಸಿಲುಕಿದ್ದ ಜನರನ್ನು ಸಂರಕ್ಷಿಸಲು ರಕ್ಷಣಾ ಬೋಟೊಂದು ಬಂದಿತ್ತು. ಮಹಿಳೆಯರಿಗೆ ಎತ್ತರದ ಬೋಟನ್ನು ಹತ್ತಲು ಯಾವುದೇ ಮೆಟ್ಟಿಲು ಇರಲಿಲ್ಲ. ಆಗ ಅಲ್ಲಿದ್ದ ಕೆಪಿ ಜೈಸಾಲ್ ಎಂಬ ಮೀನುಗಾರ ತನ್ನ ಬೆನ್ನನ್ನೇ ಬಾಗಿಸಿ ಮೆಟ್ಟಿಲು ಮಾಡಿ ಮಹಿಳೆಯರು ಬೋಟ್ ಹತ್ತಲು ಸಹಾಯ ಮಾಡುತ್ತಾರೆ.
ಅವರ ಈ ಮಾನವೀಯ ಸೇವೆಗೆ ಜಗತ್ತಿನಾದ್ಯಂತ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತದೆ. ಅವರ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಮಹೀಂದ್ರ ಕಂಪೆನಿಯು ಅವರಿಗೆ ಹೊಸ ಕಾರನ್ನು ಬಹುಮಾನವಾಗಿ ನೀಡಿ ಅಭಿನಂದಿಸಿದೆ. ಅನೇಕ ಸಂಘ ಸಂಸ್ಥೆಗಳು ಅವರನ್ನು ವಿವಿಧ ಬಹುಮಾನಗಳನ್ನು ನೀಡಿ ಗೌರವಿಸಿದೆ.

ಇಲ್ಲೂ ಕೂಡ ಕೆ ಪಿ ಜೈಸಾಲ್ ಗೆ ಕಂಡದ್ದು ಪ್ರಾಣರಕ್ಷಣೆ ಹೊರತು ನನ್ನ ವೀಡಿಯೋ ವೈರಲ್ ಆಗಿ ನನಗೆ ಬಹುಮಾನಗಳ ಸುರಿಮಳೆ ಸಿಗುತ್ತದೆ ಎಂದಲ್ಲ. ಆದರೂ ಅವರ ಈ ನಿಸ್ವಾರ್ಥ ಸೇವೆಗೆ ದುನಿಯಾದಲ್ಲಿ ಅಲ್ಲಾಹನು ಕೊಟ್ಟ ಪ್ರತಿಫಲ ಎಷ್ಟು?

ಘಟನೆ 4

ಕೇರಳದಂತೆ ತಮಿಳುನಾಡು ಕೂಡ ಜಲಪ್ರಳಯಕ್ಕೆ ಒಳಗಾಗಿತ್ತು. ಚೆನ್ನೈ ಯ ಜಲಾವೃತ ಪ್ರದೇಶದಲ್ಲಿ ಗರ್ಭಿಣಿಯಾಗಿದ್ದ ಹಿಂದೂ ಸಹೋದರಿಯೊಬ್ಬರು ಸಿಲುಕಿದ್ದರು. ಆ ಸಹೋದರಿಗೆ ಪ್ರಸವ ವೇದನೆ ಉಂಟಾಗಿತ್ತು. ಅವರನ್ನು ರಕ್ಷಿಸಲು ಯಾರೂ ಮುಂದೆ ಬಾರದ ಸಂದರ್ಭದಲ್ಲಿ ಮೊಹಮ್ಮದ್ ಯೂನುಸ್ ಎಂಬ ಇಂಜಿನಿಯರ್ ತನ್ನ ಪ್ರಾಣವನ್ನು ಒತ್ತೆಯಿಟ್ಟು ಆ ಸಹೋದರಿಯನ್ನು ರಕ್ಷಿಸಿ ಆಸ್ಪತ್ರೆಗೆ ತಲುಪಿಸಿ ಸುಖಪ್ರಸವಕ್ಕೆ ಬೇಕಾದ ವ್ಯವಸ್ಥೆ ಮಾಡುತ್ತಾರೆ. ಆ ಸಹೋದರಿ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ. ಆಗ ತಾನೆ ಭೂಮಿಗೆ ಬಂದ ಆ ಮಗುವಿಗೆ ತನ್ನನ್ನು ಮತ್ತು ತನ್ನ ಮಗುವನ್ನು ರಕ್ಷಿಸಿದ ಆಪತ್ಬಾಂಧವ ಯೂನುಸ್ ನ ಹೆಸರನ್ನು ಇಟ್ಟು ಕೃತಜ್ಞತೆಯನ್ನು ಸಲ್ಲಿಸುತ್ತಾರೆ.

ಈ ಘಟನೆಯಲ್ಲೂ ಕೂಡ ಯೂನುಸ್ ಗೆ ಆ ಸಹೋದರಿಯನ್ನು ರಕ್ಷಿಸಬೇಕು ಎಂಬ ಉದ್ದೇಶವೇ ಇತ್ತು ಹೊರತು ದುನಿಯಾದ ಬೇರೆ ಯಾವುದೇ ಉದ್ದೇಶ ಇರಲಿಲ್ಲ.

ಅವರ ನಿಸ್ವಾರ್ಥ ಸೇವೆಗೆ ಆ ಸಹೋದರಿ ನೀಡಿದ ಕೃತಜ್ಞತೆ ಹೇಗಿತ್ತು? ಸೌಹಾರ್ದತೆಗೆ ಎಂತಹ ಒಂದು ಜೀವಂತ ಉದಾಹರಣೆ ಅಲ್ಲವೇ?

ಘಟನೆ 5

ಮಂಗಳೂರಿನ ಹಂಪನಕಟ್ಟೆಯಲ್ಲಿ ಬುಟ್ಟಿಯೊಂದರಲ್ಲಿ
ಕಿತ್ತಳೆ ಹಣ್ಣು ಮಾರಿ ಬದುಕುವ ಎರಡಕ್ಷರ ಮಾತ್ರ ಗೊತ್ತಿರುವ ಕೃಶ ಕಾಯದ ಸಾಮಾನ್ಯ ವ್ಯಕ್ತಿ ಹರೇಕಳ ಹಾಜಬ್ಬ. ತನ್ನೂರಿನ ಮಕ್ಕಳಿಗೆ ಅಕ್ಷರದ ಬೆಳಕನ್ನು ಕೊಡಬೇಕೆಂಬ ಉದ್ದೇಶದಿಂದ ತನ್ನ ಕಿಂಚಿತ್ ಸಂಪಾದನೆಯ ಒಂದು ಭಾಗವನ್ನು ಶಾಲೆಗಾಗಿ ತೆಗೆದಿಟ್ಟು, ಮಧ್ಯಾಹ್ನ ಊಟವೇ ಮಾಡದೆ ತನ್ನ ಹೊಟ್ಟೆಯ ಹಸಿವನ್ನು ಕಟ್ಟಿ ಊರವರ ಮಕ್ಕಳಿಗೆ ಶಾಲೆ ಕಟ್ಟಿಸಿದ ಪುಣ್ಯಾತ್ಮ.

ಅವರ ಮನಸ್ಸಿನಲ್ಲಿ ಸ್ವಾರ್ಥ ಇರಲಿಲ್ಲ. ಅಹಂ ಇರಲಿಲ್ಲ. ಪ್ರಶಸ್ತಿ ಸನ್ಮಾನಗಳ ಕಲ್ಪನೆಯೇ ಇರಲಿಲ್ಲ.

ಆದರೆ ಇಂದು ಅಲ್ಲಾಹನು ನಮ್ಮ ಭಾರತದ ಅತ್ಯುನ್ನತ ಪ್ರಶಸ್ತಿಯನ್ನು ಅವರಿಗೆ ಕರುಣಿಸಿದನು. ನಮ್ಮ ಸಮುದಾಯದಲ್ಲಿ ಯಾರಿಗೂ ಸಿಗದ ಸೌಭಾಗ್ಯವನ್ನು ದಯಪಾಲಿಸಿದನು. ಇವತ್ತು ಅಕ್ಷರ ಸಂತನಾಗಿ ಜಾಗತಿಕವಾಗಿ ಗುರುತಿಸಿಕೊಂಡಿರುವ ಹರೇಕಳ ಹಾಜಬ್ಬ ನಮಗೆಲ್ಲರಿಗಿಂತಲೂ ಎತ್ತರವಾದ ಸ್ಥಾನವನ್ನು ಅಲಂಕರಿಸಿದ್ದಾರೆ.
ಇದಾಗಿದೆ ನಿಸ್ವಾರ