ಬೆಳಿಗ್ಗೆ 8:00 ಕ್ಕೆ ಸರಿಯಾಗಿ SSF ಒಕ್ಕೆತ್ತೂರು ಶಾಖೆ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

0
225


ದಿನಾಂಕ :15 – 8 -2021 ಇಂದು ಬೆಳಿಗ್ಗೆ 8:00 ಕ್ಕೆ ಸರಿಯಾಗಿ SSF ಒಕ್ಕೆತ್ತೂರು ಶಾಖೆ ವತಿಯಿಂದ ಸುರುಂಬಡ್ಕ ಡ್ಯಾಮ್ ಬಳಿ 75 ನೇ ಸ್ವಾತಂತ್ರ್ಯ ಅಂಗವಾಗಿ ದ್ವಜಾರೋಹನವನ್ನು ಮಾಡಲಾಯಿತು.
ದ್ವಜಾರೋಹನವನ್ನು ಹಸೈನಾರ್ ಹಾಜಿ , SYS ಕಾರ್ಯದರ್ಶಿ ರಫೀಕ್ ಫ್ಯಾನ್ಸಿ ಹಾಗೂ ಹಾರೀಸ್ ಸಿ ಎಚ್ ರವರು ನೆರೆವೇರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಶರೀಫ್ ಸಿ ಎಚ್ ಹಾಗೂ ಹಾರೀಸ್ ಸಿ ಎಚ್ ರವರು ಭಾಷಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು SSF ಒಕ್ಕೆತ್ತೂರು ಯುನಿಟ್ ಅಧ್ಯಕ್ಷರಾದ ಹರ್ಷದ್ ಸಖಾಫಿ ವಹಿಸಿದ್ದರು. ಕಾರ್ಯಕ್ರಮ ದಲ್ಲಿ SSF ಒಕ್ಕೆತ್ತೂರು ಯುನಿಟ್ ನ ಸದಸ್ಯರು ಭಾಗವಹಿಸಿದರು. ನಂತರ ಸ್ಪೊಟ್ ಕ್ವಿಝ್ ನಡೆಸಲಾಯಿತು ವಿಜಯಿಶಾಲಿಗಳಿಗೆ ತಕ್ಷಣವೇ ಬಹುಮಾನ ವಿತರಿಸಲಾಯಿತು. ಹರ್ಷದ್ ಸಖಾಫಿಯವರು ದುವಾಃ ನೆರವೇರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ಯನ್ನು ವಿತರಿಸಲಾಯಿತು.