ಮೂಡುಬಿದಿರೆ ಸರಕಾರಿ ಶಾಲೆಯಲ್ಲಿ ಹೊರಾಂಗಣವೇ ಪಾಠದಂಗಳ, ಕ್ಯಾಂಪಸ್ ಫ್ರಂಟ್ ನಿಂದ ಸ್ಥಳಕ್ಕೆ ಭೇಟಿ ಹಾಗೂ ವಿವಿಧ ಅಧಿಕಾರಿಗಳಿಗೆ ಮನವಿ

0
195

ಮೂಡುಬಿದಿರೆ : ದ.ಕ. ಜಿಲ್ಲಾ ಪಂಚಾಯತ್ ಅನುದಾನಿತ ಹಿ.ಪ್ರಾ. ಶಾಲೆ ಅಳಿಯೂರಿನ ಶಾಲೆಯಲ್ಲಿ ಸುಮಾರು 325 ವಿದ್ಯಾರ್ಥಿಗಳು ವ್ಯಾಸಂಗ ನಡೆಸುತ್ತಿದ್ದು ಸರಿಯಾದ ಕೊಠಡಿ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಬಿಸಿಲು, ಗಾಳಿ- ಮಳೆ ಲೆಕ್ಕಿಸದೆ ಅಂಗಳದಲ್ಲೇ ಕುಳಿತು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.ಪ್ರಸಕ್ತ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿರುವುದರಿಂದ ಎರಡು ತರಗತಿಗಳು ಶಾಲೆಯ ಒಳಾಂಗಣದಿಂದ ಹೊರಗೆ ಬಿದ್ದಿದೆ. ಕೊಠಡಿಗಳ ಕೊರತೆ ಪ್ರಮುಖ ಕಾರಣವಾಗಿದ್ದು, ಶಾಲೆ ಹೊರಾಂಗಣದಲ್ಲಿ ತಾತ್ಕಾಲಿಕ ತಗಡುಶೀಟ್ಗಳನ್ನು ಅಳವಡಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ.

ಬೇಸಿಗೆಯಲ್ಲಿ ತಗಡುಶೀಟ್‍ನಿಂದಾಗಿ ಬಿಸಿಲಿನ ಬೇಗೆ ಹೆಚ್ಚಾದರೆ, ಗಾಳಿ- ಮಳೆಯಲ್ಲಿ ತಗಡು ಅಪ್ಪಳಿಸಿ ವಿದ್ಯಾರ್ಥಿಗಳಿಗೆ ಹಾನಿಯಾಗುವ ಸಂಭವವೂ ಅತಿಯಾಗಿದೆ. ಈ ನಿಟ್ಟಿನಲ್ಲಿ ಕ್ಯಾಂಪಸ್ ಫ್ರಂಟ್ ಮಂಗಳೂರು ಗ್ರಾಮಾಂತರ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ಜಿಲ್ಲಾಧಿಕಾರಿ, ತಹಸೀಲ್ದಾರ್, ಉಪ ನಿರ್ದೇಶಕರ ಹಾಗೂ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತರಲಾಯಿತು. ನಿಯೋಗದಲ್ಲಿ ಮಂಗಳೂರು ನಗರ ಅಧ್ಯಕ್ಷರಾದ ಶರ್ಫುಧ್ಧೀನ್ ಬಜ್ಪೆ, ಮಂಗಳೂರು ಗ್ರಾಮಾಂತರ ಅಧ್ಯಕ್ಷರಾದ ಅಶ್ರಫ್ ಪೊರ್ಕೋಡಿ, ಕಾರ್ಯದರ್ಶಿ ಸರಫರಾಝ್, ಉಪಾಧ್ಯಕ್ಷ ಝಹೀರ್ ಸಮಿತಿ ಸದಸ್ಯರಾದ ನಬೀಲ್, ರಾಯೀಫ್ ಉಪಸ್ತಿತರಿದ್ದರು.