ವಳವೂರು ಜುಮಾ ಮಸ್ಜಿದ್ ರಸ್ತೆಯಲ್ಲಿ ಧರೆಗುರುಳಿದ ವಿದ್ಯುತ್ ಕಂಬಗಳು ಹಾಗೂ ಮರಗಳ ತೆರವು

0
256

ಬಂಟ್ವಾಳ : ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವಳವೂರು ಜುಮಾ ಮಸ್ಜಿದ್ ರಸ್ತೆಯ ಇಕ್ಕೆಳಗಳಲ್ಲಿರುವ ವಿದ್ಯುತ್ ಕಂಬಗಳು ಹಾಗೂ ಮರಗಳು ಇಂದು ಮುಂಜಾನೆ ಧರೆಗುರುಳಿದ್ದು ರಸ್ತೆ ಸಂಚಾರವು ಸ್ತಬ್ದವಾಗಿದ್ದು ತುಂಬೆ ಗ್ರಾಮ ಪಂಚಾಯತ್ ಸ್ಥಳೀಯ ಸದಸ್ಯರಾದ ಇಬ್ರಾಹಿಂ ವಳವೂರು ಘಟನಾ ಸ್ಥಳದಲ್ಲಿದ್ದು ರಸ್ತೆ ತೆರವು ಕಾರ್ಯದಲ್ಲಿ ಭಾಗಿಯಾಗಿದ್ದು ಸ್ಥಳೀಯರ ಸಹಕಾರದಿಂದ ಮರಗಳನ್ನು ತೆರವುಗೊಳಿಸಲಾಗಿದೆ. ಮೆಸ್ಕಾಂ ಇಲಾಖೆಧಿಕಾರಿಗಳು ಸ್ಥಳಕ್ಕಾಗಮಿಸಿದ್ದು ವಿದ್ಯುತ್ ಕಂಬಗಳ ದುರಸ್ತಿ ಕಾರ್ಯವು ನಡೆಯುತ್ತಿದೆ.