ಸ್ವಾತಂತ್ರ್ಯ ಹೋರಾಟ ಮಾದರಿಯಲ್ಲಿಯೇ ಅಸ್ತಿತ್ವಕ್ಕಾಗಿ ಹೋರಾಟ ನಡೆಯಲಿ – ಹನೀಫ್ ಖಾನ್ ಕೊಡಾಜೆ

0
63

ಬಂಟ್ವಾಳ : ನಿಮ್ಮ ಮಕ್ಕಳ ಕೈಗೆ ಕೇಸರಿ,ಹಸಿರು ಧ್ವಜ ಕೊಟ್ಟು ತಲವಾರು,ತ್ರಿಶೂಲ ಹಿಡಿಯುವಂತೆ ಪೇರೇಪಿಸುತ್ತಿರುವವರ ಮಕ್ಕಳು ವಿದೇಶಗಳಲ್ಲಿ ಕಲಿಯುತ್ತಿದ್ಧಾರೆ.ಅವರ ಮಕ್ಕಳು ಕಲಿತು ಮುಂದೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ.ಆದರೆ ನಿಮ್ಮ ಮಕ್ಕಳು ಬೀದಿಯಲ್ಲಿ ತಲವಾರು ತ್ರಿಶೂಲ ಹಿಡಿದು ಘರ್ಷಣೆಗೆ ಇಳಿದು ಪ್ರಾಣ ಕಳೆದುಕೊಳ್ಳುತ್ತಾರೆ.ನಮ್ಮ ಪೂರ್ವಿಕರು ಸ್ವಾತಂತ್ರ್ಯಕ್ಕಾಗಿ ಜಾತಿ,ಮತ ಮರೆತು ಹೋರಾಟ ನಡೆಸಿದ ಮಾದರಿಯಲ್ಲಿಯೇ ಇಂದು ಎಲ್ಲಾ ವರ್ಗದ ಜನರ ಅಸ್ತಿತ್ವಕ್ಕಾಗಿ ನಾವೆಲ್ಲಾ ಒಂದಾಗಿ ಹೋರಾಟ ನಡೆಸಬೇಕೆಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಸದಸ್ಯರಾದ ಹನೀಫ್ ಖಾನ್ ಕೊಡಾಜೆ ಹೇಳಿದರು.ಅವರು ಸೋಶಿಯಲ್ ಇಖ್ವಾ ಫೆಡರೇಶನ್ ಮಾಣಿ ವತಿಯಿಂದ ಸೂರಿಕುಮೇರು ಬಳಿ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸೋಶಿಯಲ್ ಇಖ್ವಾ ಫೆಡರೇಶನ್ ಅಧ್ಯಕ್ಷರಾದ ರಹೀಂ ಸುಲ್ತಾನ್ ಧ್ವಜಾರೋಹಣಗೈದರು.ಉಪಾಧ್ಯಕ್ಷರಾದ ರಿಯಾಜೆ ಕಲ್ಲಾಜೆ ಸ್ವಾತಂತ್ರ್ಯ ಸಂದೇಶ ನೀಡಿದರು.ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ಸ್ವಾತಂತ್ರ್ಯದ ಮಹತ್ವದ ಬಗ್ಗೆ ವಿವರಿಸಿದರು. ಸೂರಿಕುಮೇರ್ ಜುಮ್ಮಾ ಮಸೀದಿ ಅಧ್ಯಕ್ಷರಾದ ಮೂಸಾ ಕೆರೀಂ,ಮಾಣಿ ಪಂಚಾಯತ್ ಸದಸ್ಯ ಮಾರ್ಟಿನ್ ಇನ್ನಿತರು ಉಪಸ್ಥಿತರಿದ್ಧರು.
ಜೊತೆ ಕಾರ್ಯದರ್ಶಿ ಬಾಶಿತ್ ಬುಡೋಳಿ ಸ್ವಾಗತಿಸಿ,ಪ್ರಧಾನ ಕಾರ್ಯದರ್ಶಿ ಜೈನುಲ್ ಅಕ್ಬರ್ ಕಡೇಶ್ವಾಲ್ಯ ಕಾರ್ಯಕ್ರಮ ನಿರ್ವಹಿಸಿದರು.