ಮಾರ್ಚ್ 01 ಕ್ಕೆ ಅನುಸ್ಮರಣಾ ಮಹಾ ಸಮ್ಮೇಳನ – ನೌಫಲ್ ಅಜ್ಜಿಕಲ್ಲು

ಪಾಣಕ್ಕಾಡ್ ಸಯ್ಯಿದ್ ಮುನವ್ವರಲೀ ಶಿಹಾಬ್ ತಂಙಳ್ ಅವರು ನೇರವಾಗಿ ನಡೆಸುತ್ತಿರುವ ಶಿಹಾಬ್ ತಂಙಳ್ ರಿಲೀಫ್ ಸೆಲ್ ಕರ್ನಾಟಕ ಇದರ ವತಿಯಿಂದ ಶಿಹಾಬ್ ತಂಙಳ್ ಅನುಸ್ಮರಣಾ ಮಹಾ ಸಮ್ಮೇಳನವು ಫೆಬ್ರವರಿ 20 ರಂದು ನಡೆಯಬೇಕಿದ್ದು, ಪಾಣಕ್ಕಾಡ್ ಸಯ್ಯಿದ್ ಮುನವ್ವರಲೀ ಶಿಹಾಬ್ ತಂಙಳ್ ಅವರ ಸೂಚನೆ ಮೇರೆಗೆ ಕಾರಣಾಂತರದಿಂದ ಮುಂದೂಡಲಾಗಿದೆ‌. ಕಾರ್ಯಕ್ರಮವು ಮಾರ್ಚ್ 01, 2021 ನೇ ಸೋಮವಾರದಂದು ಮಗ್ರಿಬ್ ನಮಾಝಿನ ಬಳಿಕ ಮಿತ್ತಬೈಲಿನಲ್ಲಿ ಪಾಣಕ್ಕಾಡ್ ಸಯ್ಯಿದ್ ಮುನವ್ವರಲೀ ಶಿಹಾಬ್ ತಂಙಳ್ ಅವರ ನೇತೃತ್ವದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ, ರಾಜ್ಯ ಮಟ್ಟದ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ನಾಯಕರು, ಅಂತರಾಷ್ಟ್ರೀಯ ಭಾಷಣಗಾರರು ಭಾಗವಹಿಸಲಿದ್ದಾರೆಂದು ಎಂದು ಶಿಹಾಬ್ ತಂಙಳ್ ರಿಲೀಫ್ ಸೆಲ್ ಕಾರ್ಯಾಧ್ಯಕ್ಷರಾದ ನೌಫಲ್ ಅಜ್ಜಿಕಲ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here