ಭಾರತದ ಸಾರ್ವಭೌಮತ್ವವು ರಾಜಿಯಾಗುವಂತಹದ್ದಲ್ಲ, ಅಂತಾರಾಷ್ಟ್ರೀಯ ಶಕ್ತಿಗಳು ಪ್ರೇಕ್ಷಕರೇ ಹೊರತು ಭಾಗಿದಾರರಲ್ಲ – ಸಚಿನ್ ತೆಂಡೂಲ್ಕರ್‌

ಭಾರತದ ಸಾರ್ವಭೌಮತ್ವವು ರಾಜಿಯಾಗುವಂತಹದ್ದಲ್ಲ, ಅಂತಾರಾಷ್ಟ್ರೀಯ ಶಕ್ತಿಗಳು ಪ್ರೇಕ್ಷಕರೇ ಹೊರತು ಭಾಗಿದಾರರಲ್ಲ ಎಂದು ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್‌ ಪ್ರತಿಕ್ರಿಯಿಸಿದ್ದಾರೆ.

ರೈತರ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ಅಂತಾರಾಷ್ಟ್ರೀಯ ತಾರೆಯರಿಗೆ ಪ್ರತಿಕ್ರಿಯಿಸುತ್ತಾ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ. ಭಾರತ ಏನೆಂಬುದು ಭಾರತೀಯರಿಗೆ ತಿಳಿದಿದೆ; ಭಾರತಕ್ಕಾಗಿ ನಿರ್ಧಾರ ತೆಗೆದುಕೊಳ್ಳಲು ನಾವು ದೇಶದ ಅಡಿಯಲ್ಲಿ ಒಗ್ಗಟ್ಟಾಗುವುದನ್ನು ಮುಂದುವರಿಸುತ್ತೇವೆ ”ಎಂದು ಸಚಿನ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಪಾಪ್ ತಾರೆ ರಿಹಾನ್ನಾ ಮತ್ತು ಸ್ವೀಡಿಷ್ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಮತ್ತು ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸಂಬಂಧಿ ಮೀನಾ ಹ್ಯಾರಿಸ್ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಇದರೊಂದಿಗೆ ರೈತರ ಹೋರಾಟವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚಾ ವಿಷಯವಾಗಿತ್ತು. ಇದರ ಬೆನ್ನಲ್ಲೇ ವಿದೇಶಾಂಗ ಸಚಿವಾಲಯವು ರೈತರ ಪ್ರತಿಭಟನೆಗೆ ಅಂತಾರಾಷ್ಟ್ರೀಯ ಬೆಂಬಲ ನೀಡುತ್ತಿರುವುದನ್ನು ಖಂಡಿಸಿತ್ತು.

LEAVE A REPLY

Please enter your comment!
Please enter your name here