ಬಿಜೆಪಿ ಯುವ ಮೋರ್ಚಾ ನಾಯಕಿ ಪಮೇಲಾ ಗೋಸ್ವಾಮಿ 100 ಗ್ರಾಂ ಕೊಕೇನ್ ನೊಂದಿಗೆ ಕೊಲ್ಕತಾದಲ್ಲಿ ಬಂಧನ

ಕೊಲ್ಕತಾ : ಬಿಜೆಪಿ ಯುವ ಮೋರ್ಚಾ ನಾಯಕಿ ಪಮೇಲಾ ಗೋಸ್ವಾಮಿ 100 ಗ್ರಾಂ ಕೊಕೇನ್ ನೊಂದಿಗೆ ಕೊಲ್ಕತಾದಲ್ಲಿ ಬಂಧಿತರಾಗಿದ್ದಾರೆ. ಬಂಗಾಳ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪಮೇಲಾ ಗೋಸ್ವಾಮಿಯ ಪರ್ಸ್ ಮತ್ತು ಕಾರಿನ ಸೀಟಿನಡಿ ಲಕ್ಷಾಂತರ ರೂ. ಬೆಲೆ ಬಾಳುವ ಕೊಕೇನ್ ಪತ್ತೆಯಾಗಿದೆ.

ಆಕೆಯ ಸ್ನೇಹಿತ ಮತ್ತು ಯುವಮೋರ್ಚಾ ಸಹಯೋಗಿ ಪ್ರಬೀರ್ ಕುಮಾರ್ ಡೇ ಎಂಬಾತನನ್ನೂ ಬಂಧಿಸಲಾಗಿದೆ. ನ್ಯೂ ಅಲಿಪೊರ್ ಪ್ರದೇಶದಲ್ಲಿ ಇವರ ಬಂಧನ ನಡೆದಿದೆ.

ಪಮೇಲಾ ಮತ್ತು ಆಕೆಯ ಸ್ನೇಹಿತ ಕೆಫೆ ಒಂದಕ್ಕೆ ಕಾಫಿ ಕುಡಿಯಲು ತೆರಳುತ್ತಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಪಮೇಲಾಗೆ ನೀಡಲಾಗಿದ್ದ ಭದ್ರತಾ ಸಿಬ್ಬಂದಿಯನ್ನೂ ವಶಕ್ಕೆ ಪಡೆಯಲಾಗಿದೆ.

LEAVE A REPLY

Please enter your comment!
Please enter your name here