ಮಾಸ್ಕ್‌ ಧರಿಸದೇ ಇದ್ದಲ್ಲಿ ರಾಜ್ಯದಲ್ಲಿ ಸಂಪೂರ್ಣವಾಗಿ ಲಾಕ್‌‌ಡೌನ್‌‌ – ಮಹಾರಾಷ್ಟ್ರ ಸಿಎಂ ಉದ್ದವ್‌ ಠಾಕ್ರೆ

“ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಉದ್ದವ್‌ ಠಾಕ್ರೆ ಈ ಘೋಷಣೆಯನ್ನು ಹೊರಡಿಸಿದ್ದು, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವ ಪ್ರದೇಶದಲ್ಲಿ ಇಂದು ಸಂಜೆಯಿಂದಲೇ ಲಾಕ್‌ಡೌನ್‌‌ ಜಾರಿಗೆ ಬರಲಿದೆ” ಎಂದಿದ್ದಾರೆ.

“ದಿಢೀರನೇ ಲಾಕ್‌‌ಡೌನ್‌ ಜಾರಿಎಗ ತರುವ ಯಾವುದೇ ಉದ್ದೇಶವಿಲ್ಲ. ಸರ್ಕಾರದ ನಿಯಮಗಳನ್ನು ಜನರು ಪಾಲಿಸಬೇಕು. ಅಭಿವೃದ್ದಿ ಕಾರ್ಯಗಳಿಗೆ ಯಾವುದೇ ತೊಡಕಾಗದಂತೆ ಅಗತ್ಯ ಪ್ರದೇಶಗಳಲ್ಲಿ ಮಾತ್ರವೇ ಲಾಕ್‌ಡೌನ್‌ ಜಾರಿ ಮಾಡಲಾಗುವುದು” ಎಂದು ತಿಳಿಸಿದ್ದಾರೆ.

“ಒಂದು ವಾರಗಳ ಕಾಲ ಆಚಲ್‌‌ ಪುರ ನಗರಗಳಲ್ಲಿ ಹಾಗೂ ಅಮರಾವತಿಯಲ್ಲಿ ಲಾಕ್‌ಡೌನ್‌ ಹೇರಲಾಗಿದ್ದು, ವಾಶೀಂ ಸೇರಿದಂತೆ ಅಕೋಲಾ, ಬುಲ್ದಾನಾ, ಯವತ್ಮಾಲ್‌‌‌‌ ಹಾಗೂ ಕೆಲವು ಪ್ರದೇಶಗಳಲ್ಲಿ ಭಾಗಶಃ ಬಂದ್‌ ಮಾಡಲಾಗಿದೆ. ಅಮರಾವತಿಯಲ್ಲಿ 1000 ಕೊರೊನಾ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ 40 ಸಾವಿರಕ್ಕಿಂತ ಅಧಿಕ ಕೊರೊನಾ ಸಕ್ರಿಯ ಪ್ರಕರಣಗಳಿವೆ” ಎಂದಿದ್ದಾರೆ.

“ಒಂದು ದಿನದಲ್ಲಿ ಸುಮಾರು 6,971 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಕೊರೊನಾ ಪ್ರಾರಂಭವಾದ ಸಂದರ್ಭ ಔಷಧ ಇರಲಿಲ್ಲ. ಈಗ ಔಷಧ ಲಭ್ಯವಿದೆ. ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ ಒಂಭತ್ತು ಲಕ್ಷ ಮಂದಿ ಲಸಿಕೆ ಫಲಾನುಭವಿಗಳಿದ್ದಾರೆ” ಎಂದು ತಿಳಿಸಿದರು.

LEAVE A REPLY

Please enter your comment!
Please enter your name here