“ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ” ಸಂಸ್ಥೆಯ ಪ್ರಥಮ ಸನದುದಾನ ಮಹಾಸಮ್ಮೇಳನ

ಬಂಟ್ವಾಳ ತಾಲೂಕಿನ ಕಡೆಶ್ವಾಲ್ಯ ಗ್ರಾಮದ ನಚ್ಚಬೆಟ್ಟುವಿನಲ್ಲಿ ಕಾರ್ಯಚರಿಸುತ್ತಿರುವ ಮತ-ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆಯಾದ "ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ"ಯಲ್ಲಿ ಫೆಬ್ರುವರಿ 23,24,25 ತಾರೀಖುಗಳಲ್ಲಿ ಸಂಸ್ಥೆಯ ಪ್ರಥಮ ಸನದುದಾನ ಮಹಾಸಮ್ಮೇಳನವು ನಡೆಯಲಿದೆ ಎಂದು ಸಂಸ್ಥೆಯ ಪೂರ್ವ ವಿದ್ಯಾರ್ಥಿ ಸಂಘಟನೆ "ಇಝಾ ಫೋರಂ" ನ ಪ್ರತಿನಿಧಿಗಳು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. 

ಭಾರತೀಯ ಭಕ್ತಿ ಪಂಥದೊಂದಿಗೆ ಸಾಮರಸ್ಯದ ಭಾಂದವ್ಯವನ್ನು ಬೆಸೆದುಕೊಂಡು ಸುದೃಢ ರಾಷ್ಟ್ರ ನಿರ್ಮಾಣ ಕೈಂಕರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ ಸೂಫೀ ಮಹಾತ್ಮರ ಜೀವನ ಕ್ರಮವೂ ಇಸ್ಲಾಮಿನ ನೈಜ ರೂಪವೂ ಆದ ‘ಅಹ್ಲುಸ್ಸುನ್ನತಿ ವಲ್ ಜಮಾಅತಿನ’ ಆಚಾರ ವಿಚಾರಗಳ ಸಂರಕ್ಷಣೆ ಹಾಗೂ ತಿವ್ರಗಾಮಿ ವಿಚಾರಧಾರೆಗಳ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯ ಪ್ರವರ್ತವಾಗಿರುವ ಸಂಸ್ಥೆಯು 6 ವರ್ಷಗಳನ್ನು ಪೋರೈಸುತ್ತಿದ್ದು, 25 ನೇ ತಾರೀಖಿನಂದು ಸಂಜೆ ನಡೆಯಲಿರುವ ಪ್ರಥಮ ಸನದುದಾನ ಮಹಾಸಮ್ಮೇಳನದಲ್ಲಿ ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರು ಭಾಗವಹಿಸಲಿದ್ದಾರೆ.

ಪಸ್ತುತ ಸಮಾವೇಶದಲ್ಲಿ ಸಂಸ್ಥೆಯಲ್ಲಿ ವ್ಯಾಸಂಗ ಪೂರ್ಣಗೊಳಿಸಿದ 11 ಯುವ ವಿದ್ವಾಂಸರಿಗೆ ಸುಲ್ತಾನಿ ಹಾಗೂ ಸುನ್ನೀ ಆದರ್ಶ ತತ್ವ ಸಂಹಿತೆಯಲ್ಲಿ ವಿಶೇಷ ಅಧ್ಯಯನವನ್ನು ಪೂರ್ತಿಗೊಳಿಸಿದ 30 ವಿದ್ವಾಂಸರಿಗೆ ‘ಅಲ್-ಫುರ್ಖಾನಿ’ ಬಿರುದನ್ನು ಎ.ಪಿ ಉಸ್ತಾದರು ನೀಡಲಿದ್ದು ಝೈನುಲ್ ಉಲಮಾ ಮಾಣಿ ಉಸ್ತಾದ್,ಅಸ್ಸಯ್ಯಿದ್ ಪೆರುವಾಯಿ ತಙ್ಙಳ್,ಅಸ್ಸಯ್ಯಿದ್ ಕಿಲ್ಲೂರು ತಙ್ಙಳ್,ಅಸ್ಸಯ್ಯಿದ್ ಮಲ್’ಜಹ್ ತಙ್ಙಳ್,ಅಸ್ಸಯ್ಯಿದ್ ಇಸ್ಮಾಈಲ್ ತಙ್ಙಳ್ ಉಜಿರೆ,ಅಸ್ಸಯ್ಯಿದ್ ಕರುವೇಲ್ ತಙ್ಙಳ್, ಶಾಫಿ ಸ-ಅದಿ ಬೆಂಗಳೂರು,ಅಬೂ ಸುಫ್ಯಾನ್ ಮದನಿ,ಎಸ್.ಪಿ ಹಂಝ ಸಖಾಫಿ,ಉಸ್ಮಾನ್ ಸ-ಅದಿ ಪಟ್ಟೋರಿ,ಅಬ್ದುರ್ರಝ್ಝಾಖ್ ಮದನಿ ಅಕ್ಕರಂಗಡಿ,ಅಬ್ದುರ್ರಹ್ಮಾನ್ ಮದನಿ ಮೂಳೂರು, ರಫೀಕ್ ಸ-ಅದಿ ದೇಲಂಪಾಡಿ,ಡಾ/ಝೈನೀ ಕಾಮಿಲ್,ಜಿ.ಎಮ್ ಕಾಮಿಲ್,ಅಬ್ದುಲ್ ಲತೀಫ್ ಸಖಾಫಿ ಶಿವಮೊಗ್ಗ,ಡಿ.ಕೆ ಉಮರ್ ಸಖಾಫಿ ಕಂಬಳಬೆಟ್ಟು,ಸಂಸ್ಥೆಯ ರೂವಾರಿ ತೋಕೆ ಉಸ್ತಾದ್ ಹಾಗೂ ಮಾಜಿ ಸಚಿವರಾದ ಯು.ಟಿ ಖಾದರ್,ಶಾಸಕರಾದ ರಾಜೇಶ್ ನಾಯ್ಕ,ಮುಮ್ತಾಝ್ ಅಲಿ ಕೃಷ್ಣಾಪುರ
ಸಹಿತ ರಾಜಕೀಯ ಧಾರ್ಮಿಕ ಸಾಮುದಾಯಿಕ ರಂಗದ ಹಲವು ಪ್ರಮುಖರು ಭಾಗವಹಿಸಲಿದ್ದಾರೆ.

3 ದಿನಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ 23 ನೇ ತಾರೀಕಿನಂದು ರಾತ್ರಿ 7 ಗಂಟೆಗೆ ದಫ್ಫ್ ರಾತೀಬ್ ಹಾಗೂ 9 ಗಂಟೆಗೆ ಅಸ್ಸಯ್ಯಿದ್ ಮುಖ್ತಾರ್ ತಙ್ಙಳ್ ಕುಂಬೋಲ್ ನೇತ್ರತ್ವದಲ್ಲಿ ರಾತಿಬತುಲ್ ಜಲಾಲಿಯ್ಯ ಮಜ್ಲಿಸ್ ನಡೆಯಲಿದೆ.24 ನೇ ತಾರೀಖಿನಂದು ಸಂಜೆ 4 ಗಂಟೆಗೆ ಕೌಟುಂಬಿಕ ಸಮ್ಮಿಲನ ಹಾಗೂ 7 ಗಂಟೆಗೆ ಸೌಹಾರ್ಧ ಸಂಗಮ ಮತ್ತು ರಾತ್ರಿ 8 ಗಂಟೆಗೆ ಸಯ್ಯಿದ್ ತ್ವಾಹ ತಙ್ಙಳ್ ಪುಕೊಟೂರು ಮತ್ತು ಶಾಹಿನ್ ಬಾಬು ತಂಡದಿಂದ ಬುರ್ದಾ ಆಲಾಪನೆ ನಡೆಯಲಿದ್ದು,25 ರಂದು ಬೆಳಿಗ್ಗೆ 10 ಗಂಟೆಗೆ ಮುತ’ಅಲ್ಲಿಂ ಸಂಗಮ ಮತ್ತು 11:30 ಕ್ಕೆ ನವ ಫುರ್ಖಾನಿ ವಿದ್ವಾಂಸರಿಂದ ಆದರ್ಶ ಮುಖಾಮುಖಿ ಕಾರ್ಯಕ್ರಮ ಹಾಗೂ ಮದ್ಯಾಹ್ನ 2 ಗಂಟೆಗೆ ಗಲ್ಫ್ ಮೀಟ್ ಮತ್ತು ಪದವಿ ವಸ್ತ್ರ ವಿತರಣೆ ನಡೆಯಲಿದೆ.

ಪತ್ರಿಕಾಗೋಷ್ಟಿಯಲ್ಲಿ ,ಮುನೀರ್ ಸಖಾಫಿ ಸಾಲೆತ್ತೂರು,ಯಾಸಿರ್ ಫಾಝಿಲ್ ಪುತ್ತೂರು,ಹಸನ್ ಜಾಬಿರ್ ಫಾಲಿಳಿ ಉಳ್ಳಾಲ,ಹಸನ್ ಝುಹ್ರಿ ಮಂಗಳಪೇಟೆ,ಮಹ್’ರೂಫ್ ಆತೂರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here