ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್​ಗೆ ಬಾಹ್ಯ ಬೆಂಬಲ

ಬೆಂಗಳೂರು: ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್​ಗೆ ಇಂದು ತಮ್ಮ ಬಾಹ್ಯ ಬೆಂಬಲ ಘೋಷಿಸಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಶರತ್ ಬಚ್ಚೇಗೌಡ ಕಾಂಗ್ರೆಸ್ ಪಕ್ಷಕ್ಕೆ ಬಾಹ್ಯ ಬೆಂಬಲ ಘೋಷಿಸಿದರು. ಅವರಿಗೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಪಕ್ಷದ ಬಾವುಟ ನೀಡಿ ಸಹ ಸದಸ್ಯರ ಪ್ರಮಾಣ ಪತ್ರ ನೀಡಿ ಪಕ್ಷದ ಶಾಲು ಹೊದಿಸಿ ಸ್ವಾಗತಿಸಿದರು.

ಮುಂಬರುವ ದಿನಗಳಲ್ಲಿ ಎದುರಾಗುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಗೆಲ್ಲುವ ಹಾಗೂ ನಮಗೊಂದು ಅಧಿಕೃತ ಗುರುತು ಪಡೆಯುವ ಸಲುವಾಗಿ ಶರತ್ ಬಚ್ಚೇಗೌಡ ಕಾಂಗ್ರೆಸ್​​ಗೆ ಇಂದು ತಮ್ಮ ಭಾಷೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಧಿಕೃತ ಸೇರ್ಪಡೆಗೆ ಸಾಕಷ್ಟು ತಾಂತ್ರಿಕ ತೊಡಕುಗಳು ಎದುರಾಗಲಿವೆ. ಮುಂಬರುವ ದಿನಗಳಲ್ಲಿ ತಮ್ಮ ಆಯ್ಕೆ ಮುಕ್ತ ವಾಗಿರಲಿ ಎಂಬ ಉದ್ದೇಶಕ್ಕೆ ಅವರು ಇಂದು ಕಾಂಗ್ರೆಸ್​​ಗೆ ಅಧಿಕೃತವಾಗಿ ಸೇರ್ಪಡೆ ಆಗಲಿಲ್ಲ.

LEAVE A REPLY

Please enter your comment!
Please enter your name here