ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸೋಂ ಹಾಗೂ ಪುದುಚೇರಿ ಪಂಚ ರಾಜ್ಯಗಳ ಚುನಾವಣೆ

ನವದೆಹಲಿ: ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸೋಂ ಹಾಗೂ ಪುದುಚೇರಿ ವಿಧಾನಸಭೆ ಚುನಾವಣೆಗೆ ಇದೀಗ ಕೇಂದ್ರ ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆಯಾಗಿದೆ.

ಐದು ರಾಜ್ಯಗಳಲ್ಲಿ ಒಟ್ಟು 18.68 ಕೋಟಿ ಮತದಾರರು ವೋಟ್ ಮಾಡಲಿದ್ದು, 2.7 ಲಕ್ಷ ವೋಟಿಂಗ್​ ಕೇಂದ್ರ ಇರಲಿವೆ. ಕೋವಿಡ್ ಕಾರಣ ಒಂದು ಗಂಟೆ ಹೆಚ್ಚು ಮತದಾನಕ್ಕೆ ಅವಕಾಶ ನೀಡಲಾಗಿದೆ.

ಚುನಾವಣಾ ದಿನಾಂಕ ಇಂತಿದೆ

ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ

ಮೊದಲ ಹಂತ: ಮಾರ್ಚ್​ 27ಎರಡನೇ ಹಂತ ಏಪ್ರಿಲ್​ 1ಮೂರನೇ ಹಂತ ಏಪ್ರಿಲ್ 6ನಾಲ್ಕನೇ ಹಂತ ಏಪ್ರಿಲ್ 10ಐದನೇ ಹಂತ ಏಪ್ರಿಲ್​ 17ಆರನೇ ಹಂತ ಏಪ್ರಿಲ್​ 22ಏಳನೇ ಹಂತ ಏಪ್ರಿಲ್​ 26ಎಂಟನೇ ಹಂತ ಏಪ್ರಿಲ್​ 29ಮೇ 2ರಂದು ಚುನಾವಣೆ ಫಲಿತಾಂಶ
ಕೇರಳ ಜತೆಗೆ ತಮಿಳುನಾಡಿನ ಚುನಾವಣೆ ಎಪ್ರಿಲ್ 6ರಂದು

ತಮಿಳುನಾಡಿನ 234 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ವೋಟಿಂಗ್​ಪುದುಚೇರಿಯಲ್ಲಿ ಏಪ್ರಿಲ್​ 6ರಂದು ಮತದಾನಅಸ್ಸೋಂನಲ್ಲಿ ಮೂರು ಹಂತದಲ್ಲಿ ವೋಟಿಂಗ್ಮಾರ್ಚ್​ 27ರಂದು ಮೊದಲ ಹಂತ, ಏಪ್ರಿಲ್​ 1ರಂದು ಎರಡನೇ ಹಂತ ಹಾಗೂ ಏಪ್ರಿಲ್ 6ರಂದು ಮೂರನೇ ಹಂತ


ಕೇರಳ: 140 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ವೊಟಿಂಗ್​ : 12 ಮಾರ್ಚ್​ ನಾಮಪತ್ರ ಸಲ್ಲಿಕೆ20 ಮಾರ್ಚ್ ನಾಮಪತ್ರ ಪರಿಶೀಲನೆ22 ಮಾರ್ಚ್​ ನಾಮಪತ್ರ ಹಿಂಪಡೆತ6 ಏಪ್ರಿಲ್​ ರಂದು ಮತದಾನಮೇ. 2ರಂದು ಮತ ಎಣಿಕೆ

ಅಸ್ಸೋಂದಲ್ಲಿ ಮೂರು ಹಂತದಲ್ಲಿ ಮತದಾನ : ಅಸ್ಸಾಂ: ಒಟ್ಟು 3 ಹಂತಗಳಲ್ಲಿ ಮತದಾನಮೊದಲ ಹಂತ – 2ನೇ ಮಾರ್ಚ್ ಅಧಿಸೂಚನೆ, 77 ವಿಧಾನಸಭೆ ಕ್ಷೇತ್ರ9 ಮಾರ್ಚ್ ನಾಮಪತ್ರ ಸಲ್ಲಿಕೆಗೆ ಕೊನೆ ದಿನನಾಮಪತ್ರ ಪರಿಶೀಲನೆ 10 ಮಾರ್ಚ್ನಾಮಪತ್ರ ಹಿಂಪಡೆತಕ್ಕೆ ಕೊನೆ ದಿನ: 12ನೇ ಮಾರ್ಚ್ಮತದಾನ: 27ನೇ ಮಾರ್ಚ್ಮತದಾನ, 2 ಮೇ ಮತ ಎಣಿಕೆಅಸ್ಸಾಂ 2ನೇ ಹಂತ 39 ಕ್ಷೇತ್ರಮಾರ್ಚ್​ 5ಕ್ಕೆ ಅಧಿಸೂಚನೆಮಾ.12 ನಾಮಪತ್ರ ಸಲ್ಲಿಕೆಮಾ.17ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನಮೂರನೇ ಹಂತ 1 ಏಪ್ರಿಲ್ ಮತದಾನ

31 ಮೇ ಅಸ್ಸೋಂ ವಿಧಾನಸಭೆ ಅವಧಿ ಮುಕ್ತಾಯ ದಿನಾಂಕ

ತಮಿಳುನಾಡು 24 ಮೇಪಶ್ಚಿಮ ಬಂಗಾಳ 30 ಮೇಕೇರಳ 1 ಜೂನ್​ಪುದುಚೇರಿ 8 ಜೂನ್​
824 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಆನ್​ಲೈನ್ ಮೂಲಕ ನಾಮಪತ್ರ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ.

ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರ, ತಮಿಳುನಾಡು 234, ಕೇರಳದಲ್ಲಿ 140 ಸ್ಥಾನ, ಅಸ್ಸೋಂದಲ್ಲಿ 126 ಕ್ಷೇತ್ರ ಹಾಗೂ ಪುದುಚೇರಿ 30 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ

ಚುನಾವಣಾ ಆಯೋಗದ ಹಲವು ಸೇವೆಗಳನ್ನು ಆನ್​ಲೈನ್​ ಮೂಲಕ ಒದಗಿಸಲಾಗುತ್ತಿದೆ. ಕೋವಿಡ್ ಆತಂಕವಿರುವುದರಿಂದ ಜನರು ಅವುಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ

ಪ್ರಚಾರಕ್ಕೆ ಹೊಸ ನಿಯಮಗಳು ಇಂತಿವೆ

1) ಮನೆಮನೆ ಪ್ರಚಾರಕ್ಕೆ ಅಭ್ಯರ್ಥಿ ಸೇರಿ ಕೇವಲ ಐವರು ತೆರಳಬಹುದು.
2) ಬಹಿರಂಗ ಸಭೆಗಳಿಗೆ ಅವಕಾಶವಿದೆ. ಸ್ಥಳೀಯ ಮಟ್ಟದಲ್ಲಿ ಅಧಿಕಾರಿಗಳು ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ
3) ಬಹಿರಂಗ ಸಭೆಗಳಿಗೆ ಮೈದಾನಗಳನ್ನು ಮೊದಲೇ ಗುರುತಿಸಿ ಅಧಿಕಾರಿಗಳು ಪ್ರಕಟಿಸುತ್ತಾರೆ.
4) ಐದು ರಾಜ್ಯಗಳಲ್ಲಿ ಇಂದಿನಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿ

LEAVE A REPLY

Please enter your comment!
Please enter your name here