ಶಿಹಾಬ್ ತಂಙಳ್ ರಿಲೀಫ್ ಸೆಲ್ ಕರ್ನಾಟಕ ಮಾಡುತ್ತಿರುವ ಕೆಲಸ ಶ್ಲಾಘನೀಯವಾದುದು – ಪಾಣಕ್ಕಾಡ್ ಮುನವ್ವರಲೀ ಶಿಹಾಬ್ ತಂಙಳ್

ಬಿ.ಸಿ ರೋಡ್: ಚಾರ್ಮಾಡಿ ಸಮೀಪದಲ್ಲಿ ನಿರ್ಮಾಣ ಹಂತದಲ್ಲಿ ನಿರ್ಮಾಣ ಕಾರ್ಯದಲ್ಲಿ ಇರುವ ಮನೆ, ಲಾಕ್ ಡೌನ್ ಸಮಯದಲ್ಲಿ ಮಾಡಿದ ಜನಪರ ಸೇವೆ , ಯತೀo ವಿದ್ಯಾರ್ಥಿಗಳ ದತ್ತು ಪಡೆದು ಉಚಿತ ಶಿಕ್ಷಣ ಮುಂತಾದ ಕಾರ್ಯಕ್ರಮಗಳು ಮಾಡುತ್ತಿರವ ಶಿಹಾಬ್ ತಂಙಳ್ ರಿಲೀಫ್ ಸೆಲ್ ಕರ್ನಾಟಕ ಸಮಿತಿಯ ಕೆಲಸ ಅದು ಶ್ಲಾಘನೀಯವಾದುದು ಎಂದು ಶಿಹಾಬ್ ತಂಙಳ್ ರಿಲೀಫ್ ಸೆಲ್ ಸ್ಥಾಪಕರಾದ ಬಹುll ಪಾಣಕ್ಕಾಡ್ ಸಯ್ಯಿದ್ ಮುನವ್ವರಲೀ ಶಿಹಾಬ್‌ ತಂಙಳ್‌ ಹೇಳಿದರು.

ಕಾರುಣ್ಯದ ಹಸ್ತ ನಲುಮೆಯ ನೋಟ ವೆಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಾಚರಿಸುತ್ತಿರುವ ಶಿಹಾಬ್ ತಂಙಳ್ ರಿಲೀಫ್ ಸೆಲ್ ಕರ್ನಾಟಕ ಇದರ ವತಿಯಿಂದ ಪಾಣಕ್ಕಾಡ್ ಸಯ್ಯಿದ್ ಮುಹಮ್ಮದಲೀ ಶಿಹಾಬ್ ತಂಙಳ್ ರವರ ಅನುಸ್ಮರಣಾ ಮಹಾ ಸಮ್ಮೇಳನ ದಿನಾಂಕ ಮಾರ್ಚ್ 01 ರಂದು ಬಿ.ಸಿ ರೋಡ್ ಕೈಕಂಬದ ಪೂಂಜ ಮೈದಾನದಲ್ಲಿ ಶೈಖುನಾ ಮಿತ್ತಬೈಲ್ ಉಸ್ತಾದ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಧಾಟಿಸಿ ಮಾತನಾಡಿದರು.

ಬಹುll ಸಯ್ಯಿದ್ ಅಮೀರ್ ತಂಙಳ್ ಅಲ್-ಬುಖಾರಿ ಕಿನ್ಯಾ ಪ್ರಾರ್ಥನೆ ನೆರೆವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಹುll ಇರ್ಶಾದ್ ಹುಸೈನ್ ದಾರಿಮಿ ಅಲ್-ಜಝರಿ ಮಿತ್ತಬೈಲ್ ವಹಿಸಿದರು. ಬಹುll ಹಾಫಿಳ್ ಅಹ್ಮದ್ ಕಬೀರ್ ಬಾಖವಿ ಕೊಲ್ಲಂ ಮುಖ್ಯ ಪ್ರಭಾಷಣ ಮಾಡಿದರು.

ಈ ಕಾರ್ಯಕ್ರಮದಲ್ಲಿ ಸರ್ವ ಜುಮಾ ಮಸೀದಿಯ ಅಧ್ಯಕ್ಷರುಗಳು, ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಪ್ರಮುಖ ನಾಯಕರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಡ್ವಕೇಟ್ ನೌಶಾದ್ ಅನ್ಸಾರಿ ಬಾಂಬಿಲ , ಲುಕ್ಮಾನ್ ಬಂಟ್ವಾಳ ಹಾಗೂ ಇಸ್ಮಾಯಿಲ್ ಕೆ.ಇ.ಎಲ್ ಅವರನ್ನು ಸನ್ಮಾನಿಸಲಾಯಿತು. ಉವೈಸ್ ತೋಕೆ ಖಿರಾಹತ್ ಪಠಿಸಿದರು. ಕಾರ್ಯಕ್ರಮದಲ್ಲಿ ಸ್ವಾಗತವನ್ನು ಬಹುll ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಸ್ವಾಗತಿಸಿದರು. ಇಬ್ರಾಹಿಂ ಬಾತಿಷಾ ಕೊಡ್ಲಿಪೇಟೆ ವಂದಿಸಿದರು.

LEAVE A REPLY

Please enter your comment!
Please enter your name here