ಮಂಗಳೂರು: ಮ.ನ.ಪಾ ನೂತನ ಮೇಯರ್‌ ಆಗಿ ಪ್ರೇಮಾನಂದ ಶೆಟ್ಟಿ, ಉಪಮೇಯರ್‌ ಆಗಿ ಸುಮಂಗಲಾ ರಾವ್‌ ಆಯ್ಕೆ

ಮಂಗಳೂರು ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತದ ಎರಡನೇ ಅವಧಿಯ ಮೇಯರ್‌, ಉಪಮೇಯರ್‌ ಚುನಾವಣೆ ಇಂದು ನಡೆದಿದ್ದು ಮೇಯರ್‌ ಆಗಿ ಬಿಜೆಪಿಯ ಹಿರಿಯ ಸದಸ್ಯ ಪ್ರೇಮಾನಂದ ಶೆಟ್ಟಿ, ಉಪಮೇಯರ್‌ ಆಗಿ ಸುಮಂಗಲಾ ರಾವ್‌ ಆಯ್ಕೆಯಾಗಿದ್ದಾರೆ.

ಮೇಯರ್‌ ಸಾಮಾನ್ಯ ಹಾಗೂ ಉಪ ಮೇಯರ್‌ ಸಾಮಾನ್ಯ ಮಹಿಳೆ ಮೀಸಲಾತಿಯಿದ್ದು ಮೇಯರ್‌ ಸ್ಥಾನಕ್ಕೆ ಪ್ರೇಮಾನಂದ ಅವರ ಹೆಸರು ಕೇಳಿಬಂದಿದ್ದರೂ ಕೂಡಾ ಉಪಮೇಯರ್‌ ಸ್ಥಾನಕ್ಕೆ ಸುಮಾರು 10 ಕ್ಕೂ ಅಧಿಕ ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದರು.

ಮಾರ್ಚ್ 2 ರ ಮಂಗಳವಾರ ಮಧ್ಯಾಹ್ನ ಮತದಾನ ನಡೆದಿದ್ದು ನಿರೀಕ್ಷೆಯಂತೆ ಮೇಯರ್‌ ಆಗಿ ಪ್ರೇಮಾನಂದ ಶೆಟ್ಟಿಯವರು ಆಯ್ಕೆಯಾಗಿದ್ದು ಉಪಮೇಯರ್‌ ಆಗಿ ಸುಮಂಗಲಾ ರಾವ್‌ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here