ಕೇರಳ-ಕರ್ನಾಟಕ ಗಡಿನಾಡಿಗೊಂದು ಗಡಿನಾಡ ಸಹಚರ

ಕರ್ನಾಟಕ ಸ್ಟೇಟ್ SKSSF ಅಬುಧಾಬಿ ಘಟಕ ಸಾರಥ್ಯದಲ್ಲಿ ಗಡಿನಾಡ ಸಹಚರ ಆಂಬ್ಯುಲೆನ್ಸ್ ಸೇವೆಯನ್ನು ದಿನಾಂಕ:25/12/2020 ಶುಕ್ರವಾರ ಸಂಜೆ 4:00 ಗಂಟೆಗೆ ಕುದ್ದುಪದವಿನಲ್ಲಿ ಲೋಕಾರ್ಪಣೆ ಗೊಳಿಸಲಾಯಿತು.

SKSSF ರಾಜ್ಯಾಧ್ಯಕ್ಷರಾದ ಅನೀಸ್ ಕೌಸರಿ,SKSSF DK ಜಿಲ್ಲಾಧ್ಯಕ್ಷರಾದ ಅಮೀರ್ ತಂಗಳ್ ಕಿನ್ಯ, ಪ್ರ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ,ವಿಟ್ಲ ವಲಯ ಕಾರ್ಯದರ್ಶಿ ರಫೀಕ್ ಮುಸ್ಲಿಯಾರ್ ಕಡಂಬು ಸೇರಿದಂತೆ ಕೇಪುಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀನಿವಾಸ ರೈ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಬಾಲಕೃಷ್ಣಸ್ ಶೆಟ್ಟಿ ಬೇಂಗ್ರೋಡಿ,ಮರಕ್ಕಿಣಿ ಮುದರ್ರಿಸ್ ನೌಫಲ್ ಹುಸೈನ್ ಫೈಝಿ, ಅಡ್ಯನಡ್ಕ ಮುದರ್ರಿಸ್ ಅಬ್ದುಲ್ಲಾ ರಹ್ಮಾನಿ, ಕುದ್ದುಪದವು ಇಮಾಮ್ ಮುನೀರ್ ಅಝ್ಹರಿ,ಶಾಹಜಾನ್ ಅಝ್ಹರಿ, ದ.ಕ ಜಿಲ್ಲಾ ಪಂಚಾಯತ್ ಸದಸ್ಯ MS ಮಹಮ್ಮದ್, ಮರಕ್ಕಿಣಿ ಜಮಾಅತ್ ಅಧ್ಯಕ್ಷರಾದ ಷರೀಫ್ ಮೂಸಾ ವೈದ್ಯರಾದ ರಮೇಶ್ ಕುಮಾರ್ ಬಿಳಿರಾಯ,ಗೋಪಾಲ ಪಾಟಾಳಿ,ಶ್ರೀನಿವಾಸ್ ಶೆಟ್ಟಿ ಬೇಂಗ್ರೋಡಿ, ಅಲ್ ಹುದಾ ಚಾರಿಟಿ ಫೌಂಡೇಶನ್ ಮುಚ್ಚಿರಪದವು ಇದರ ಅಧ್ಯಕ್ಷರಾದ ಶಾಫಿ ಮುಚ್ಚಿರಪದವು,ಅಬ್ದುಲ್ ರಝಾಕ್ ಸಾರಡ್ಕ, ತಾಜ್ ಗಡಿನಾಡು,ಪೊಡಿಯ ಹಾಜಿ ಮೈರ, ಕಲಂದರ್ ಮಂಜನಡ್ಕ ಅಧ್ಯಕ್ಷರು NIYA, ಉಸ್ಮಾನ್ ಮರಕ್ಕಿಣಿ ಅದ್ಯಕ್ಷರು ಅಡ್ಯನಡ್ಕ ಮಸೀದಿ, ಮುರಳೀಧರ್ ರೈ ಕೇಪು, SKSSF ಕುದ್ದುಪದವು ಶಾಖಾಧ್ಯಕ್ಷರಾದ ಮಹಮ್ಮದ್ ಎಸ್, ಮರಕ್ಕಿಣಿ ಶಾಖಾಧ್ಯಕ್ಷರಾದ ಇಬ್ರಾಹಿಂ ಕೆದುಮೂಲೆ ಸೇರಿದಂತೆ ಜಾತಿ-ಧರ್ಮ ಭೇದವಿಲ್ಲದೆ ಸೇರಿದ ನೂರಾರು ಜನರ ಸಮ್ಮುಖದಲ್ಲಿ ಕುದ್ದುಪದವು ಜಂಕ್ಷನ್’ನಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಲೋಕಾರ್ಪಣೆ ಮಾಡಲಾಯಿತು.

ಕಾರ್ಯಕ್ರಮವನ್ನು ಅಮೀರ್ ತಂಗಳ್ ಕಿನ್ಯ ಉದ್ಘಾಟಿಸಿ ದುಃವಾ ಗೈದರು. ಹನೀಫ್ ಹರಿಯಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಕೇರಳ-ಕರ್ನಾಟಕದ ಗಡಿಭಾಗವಾದ ಈ ಪ್ರದೇಶದ ಜನರ ಬಹುಕಾಲದ ಬೇಡಿಕೆಯೊಂದು ಇವತ್ತು ಈಡೇರಿದಂತಾಗಿದೆ. ಇದರ ಸೇವೆ ಬಡ-ದೀನದಲಿತರಿಗೆ ಸಂಪೂರ್ಣ ಉಚಿತವಾಗಿದ್ದು, ಅನುಕೂಲಸ್ಥರು ತಮ್ಮಿಂದ ಸಾಧ್ಯವಾಗುವ ರೀತಿಯಲ್ಲಿ ಸಹಕಾರವನ್ನು ನೀಡಿ ಈ ಸೇವೆಯನ್ನು ಗಟ್ಟಿ ಗೊಳಿಸಬೇಕೆಂದು ಕೇಳಿಕೊಂಡರು, ಅದರೊಂದಿಗೆ ಈ ಊರಿನಲ್ಲಿ ಇದರಲ್ಲಿ ಹೋಗುವ ಜನರು ಕಡಿಮೆಯಾಗಲಿ ಆರೋಗ್ಯವಂತ ಸಮಾಜ ನಿರ್ಮಾಣವಾಗಲಿ ಎಂದು ಹಾರೈಸಿದರು, ಇದೇ ಸಂದರ್ಭದಲ್ಲಿ ಹಲವಾರು ವರ್ಷಗಳ ಹಿಂದೆ ಮಸೀದಿಯ ಶ್ರಮದಾನದ ಸಂದರ್ಭದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಹಿಂದೂ ಬಾಂಧವರ ಪೈಕಿ ಮೂರು ಮಂದಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂದಿನ ಅವರ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಶ್ರೀನಿವಾಸ ರೈ ಮಾತನಾಡಿ ಕೇಪುಗ್ರಾಮ ಪಕ್ಷ-ಜಾತಿಗಿಂತ ಮಿಗಿಲಾಗಿ ಮಾನವೀಯತೆಗೆ ಹೆಚ್ಚಿನ ಆದ್ಯತೆಯನ್ನು ಕಲ್ಪಿಸಿದ ಊರಾಗಿದೆ,ನಮ್ಮ ಸಂಬಂಧ ಮಾನವೀಯ ಸಂಬಂಧ ಎಂದು ತಿಳಿಹೇಳಿದರು.
M.S ಮಹಮ್ಮದ್ ರವರು ಮಾತನಾಡಿ ಆಂಬುಲೆನ್ಸ್ ಸೇವೆಯನ್ನು ಒದಗಿಸಿಕೊಟ್ಟ ಅಬುಧಾಬಿ SKSSF ಸೇವೆಯನ್ನು ಶ್ಲಾಘಿಸುತ್ತಾ ಭವ್ಯ ಭಾರತದ ಜಾತ್ಯತೀತತೆಯನ್ನು ಗಟ್ಟಿಗೊಳಿಸುವಂತೆ ಕೇಳಿಕೊಂಡರು.
ಮುಖ್ಯ ಪ್ರಭಾಷಣಗೈದ ಅನೀಸ್ ಕೌಸರಿಯವರು
ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಎಂಬ ಸಂಘಟನೆ ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪಿಸಲ್ಪಟ್ಟು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶ ವಿಭಜನೆಯ ಸಂದರ್ಭದಲ್ಲಿ ನಾವು ಭಾರತವನ್ನು ಬಿಟ್ಟುಹೋಗಲಾರೆವು ಎಂದು ಘೋಷಣೆ ಮಾಡಿದ ಹೆಮ್ಮೆಯ ಸಂಘಟನೆಯಾಗಿರುತ್ತದೆ.
ಅದರ ವಿದ್ಯಾರ್ಥಿ ಸಂಘಟನೆಯೇ SKSSF. ಇದರ ತುರ್ತು ಸೇವಾಗಟಕವಾದ ವಿಖಾಯ ಪ್ರಾಕೃತಿಕ ವಿಕೋಪದ ಸಂದರ್ಭಗಳಲ್ಲಿ ಜೋಡುಪಾಲಾ ಹಾಗು ಕೇರಳದಲ್ಲಿ ನಡೆಸಿದ ಅನನ್ಯ ಸೇವೆಯನ್ನು ಸುಂದರವಾಗಿ ವಿವರಿಸಿದರು.
ಈ ಪ್ರದೇಶದ ಜನರು ಒಂದು ಯೋಜನೆಯನ್ನು ಕೈಗೊಂಡರೆ ಅದನ್ನು ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತರುವಲ್ಲಿ ನಿಸ್ಸೀಮರು ಅದು ಈ ಭಾಗದ ಜನರ ವಿಶೇಷತೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು ಹಾಗೂ SKSSF ಅಬುಧಾಬಿ ಘಟಕದ ಸೇವೆಯನ್ನು ಕೊಂಡಾಡಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಶಾಖಾ ಮುಖಂಡರುಗಳಿಗೆ ಆಂಬುಲೆನ್ಸ್ ಕೀ ಹಸ್ತಾಂತರ ಮಾಡಲಾಯಿತು.
ಅಲ್ ಹುದಾ ಚಾರಿಟಿ ಫೌಂಡೇಶನ್ ಮುಚ್ಚಿರಪದವು ಹಾಗೂ ಮುಹಮ್ಮದ್ ಸೂಫಿ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಬದ್ರುದ್ದೀನ್ ಅಥಿತಿಗಳಿಗೆ ಸ್ವಾಗತ ಕೋರಿ, ಕರೀಮ್ ಮೂಸಾ ವಂದಿಸಿದರು.

ನಮ್ಮ ಈ ಸಮಾಜಮುಖಿ ಕಾರ್ಯಕ್ಕೆ ತನು-ಮನ-ಧನ ಗಳಿಂದ ಉದಾರವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಹೃದಯಾಂತರಾಳದ ಅನನ್ಯ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ.
ನಿಮ್ಮ ಈ ದಾನವನ್ನು ಸರ್ವಶಕ್ತನಾದ ಅಲ್ಲಾಹನು ಸ್ವೀಕರಿಸಲಿ.
ಎಲ್ಲಾ ರೀತಿಯ ವಿಪತ್ತು ರೋಗ-ರುಜಿನಗಳಿಂದ ನಿಮ್ಮನ್ನೂ ಕುಟುಂಬವನ್ನೂ ಅಲ್ಲಾಹು ಕಾಪಾಡಲಿ – ಆಮೀನ್

LEAVE A REPLY

Please enter your comment!
Please enter your name here