ಹರೇಕಳ ಗ್ರಾಮ ಪಂಚಾಯತ್ ಕಾಂಗ್ರೆಸ್ ವಿಜಯೋತ್ಸವ: ಶಾಸಕ ಯು.ಟಿ.ಖಾದರ್ ಅಭಿನಂದನೆ

ಮಂಗಳೂರು, ಜನವರಿ 1: ಹರೇಕಳ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಲಿತ ಅಭ್ಯರ್ಥಿಗಳು ಅತೀ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಅಧಿಕಾರವನ್ನು ತಮ್ಮ ಕೈವಶ ಮಾಡಿಕೊಂಡಿದ್ದಾರೆ. ಬಹುಮತ ಗಳಿಸಿದ ಬಗ್ಗೆ ಇಂದು ಹರೇಕಳದಲ್ಲಿ ವಿಜಯೋತ್ಸವವನ್ನು ಆಚರಿಸಿಕೊಂಡರು. ಕಾರ್ಯಕ್ರಮದಲ್ಲಿ ಶಾಸಕ ಯು.ಟಿ.ಖಾದರ್ ಪಾಲ್ಗೊಂಡು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಹರೇಕಳ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತದಾರರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಅತ್ಯಂತ ಬಹುಮತದಿಂದ ಗೆಲ್ಲಿಸುವ ಮೂಲಕ ಕಾಂಗ್ರೆಸ್‌ ಪಕ್ಷದ ಮೇಲೆ, ನನ್ನ ಮೇಲೆ ವಿಶ್ವಾಸವನ್ನು ಪ್ರಕಟಿಸಿದ್ದೀರಿ. ನೀವು ಇಟ್ಟಂತಹ ಪ್ರೀತಿ, ವಿಶ್ವಾಸಕ್ಕೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಭಾವುಕರಾಗಿ ನುಡಿದರು.

     ನೀವು ಯಾವ ವಿಶ್ವಾಸವನ್ನು ಇಟ್ಟುಕೊಂಡು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟಿದ್ದೀರೋ, ಆ ವಿಶ್ವಾಸವನ್ನು ಉಳಿಸಿಕೊಂಡು, ಸರಕಾರದಲ್ಲಿ ಸಿಗುವಂತಹ ಎಲ್ಲಾ ಸವಲತ್ತುಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಶಕ್ತಿ ಮೀರಿ ದುಡಿಯುತ್ತೇನೆ. ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ತೃಪ್ತಿಕರ ಸಾಧನೆಯನ್ನು ಮಾಡಿದೆ. ಆಡಳಿತ ಪಕ್ಷದ ಶಕ್ತಿ ಪ್ರದರ್ಶನದ ಮುಂದೆಯೂ ಕಾಗ್ರೆಸ್‌ ಸರಿ ಸಮಾನಾಗಿ ಹೋರಾಟ ನಡೆಸಿದ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ, ಜನರು ಬಿ.ಜೆ.ಪಿಯ ಆಡಳಿತದಲ್ಲಿ ಬೇಸತ್ತು ಹೋಗಿದ್ದಾರೆ. ಜನಸಾಮಾನ್ಯರಿಗೆ ಸಿಗುವಂತಹ ಒಂದೇ ಒಂದು ಸವಲತ್ತು ಸಿಗುತ್ತಿಲ್ಲ ಎಂದು ಹೇಳಿದ ಖಾದರ್ ಹರೇಕಳ ಗ್ರಾಮ ಮುಂದಿನ ದಿನಗಳಲ್ಲಿ ಮಾದರಿ ಗ್ರಾಮವಾಗಲಿ ಎಂಬ‌ ಶುಭ ಹಾರೈಸಿದರು. ಈ ವಿಜಯೋತ್ಸವಹರೇಕಳ ಗ್ರಾಮದ ವಿಜಯೋತ್ಸವ, ಸೌಹಾರ್ದತೆ, ಪ್ರೀತಿ, ವಿಶ್ವಾಸದ ವಿಜಯೋತ್ಸವ ಆಗಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹರೇಕಳ ಪಂಚಾಯತ್ ನಲ್ಲಿ ಕಾಂಗ್ರೆಸ್‌ ಬೆಂಬಲಿತರು ಬಹುಮತ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಚುನಾವಣೆಯ ನೇತೃತ್ವ ವಹಿಸಿದ ಮಹಾಬಲ ಹೆಗ್ಡೆ ದೆಬ್ಬೇಲಿಯನ್ನು ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಅಭಿನಂದಿಸಲಾಯಿತು.
     ಮಂಗಳೂರು ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಮುಸ್ತಫ ಹರೇಕಳ, ಅಶೋಕ್ ಶೆಟ್ಟಿ ಮಜಲ್, ಬಶೀರ್ ಉಂಬುದ, ವಿಶಾಲ್ ಕೊಲ್ಯ, ಶರೀಫ್ ಕೊಜಪಾಡಿ, ಇಸ್ಮಾಯಿಲ್ ಫರೀದ್ ನಗರ, ಇಸ್ಮಾಯಿಲ್.ಎಚ್. ಫರೀದ್ ನಗರ, ಫಾರೂಕ್.ಎಸ್. ಫರೀದ್ ನಗರ, ಝಕರಿಯ್ಯಾ ಮಲಾರ್, ಅಝೀಝ್ ಉಂಬುದ,  ದಿನೇಶ್ ಕುಂಪಲ, ಸಿ.ಎಂ.ರವೂಫ್, ಇಂತಿಯಾಝ್ ಉಲ್ಲಾಸ್ ನಗರ, ನುಸ್ರತ್ ಬಾನು, ಪಂಚಾಯತ್ ಸದಸ್ಯರಾದ ಬದ್ರುದ್ದೀನ್ ಹರೇಕಳ, ಅಬ್ದುಲ್ ಮಜೀದ್, ಸತ್ತಾರ್ ಬಾವಲಿಗುರಿ, ಅಬೂಬಕರ್ ಸಿದ್ದೀಕ್, ರಫೀಕ್ ಆಲಡ್ಕ, ಹನೀಫ್ ಬೈತಾರ್, ಕಲ್ಯಾಣಿ, ಪೂವಕ್ಕು, ಅನಿತಾ ಡಿಸೋಜ, ಪ್ರಿಯಾ ಪಾಯಸ್, ಪುಷ್ಪಲತಾ, ಜಯಂತಿ, ಗುಲಾಬಿ ಮುಂತಾದವರು ವಿಜಯೋತ್ಸವದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here