ಬೋಳಿಯಾರು: ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದ್ದಕ್ಕೆ ಎಸ್ ಡಿಪಿಐ ಕಾರ್ಯಕರ್ತರಿಂದ ಹಲ್ಲೆ !

ಕೊಣಾಜೆ, ಜ.2: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಬೆಂಬಲ ನೀಡಿದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತನಿಗೆ SDPI ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಬೋಳಿಯಾರು ಮದಕ ಎಂಬಲ್ಲಿ ನಡೆದಿದೆ. 
ಪಾಣೆಲ ನಿವಾಸಿ ನಾಸಿರ್ ಎಂಬವರಿಗೆ SDPI ಕಾರ್ಯಕರ್ತರ ಗುಂಪು ದೊಣ್ಣೆಯಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ನಾಸಿರ್ ಅವರು ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಹಮ್ಮದ್ ಎಂಬವರ ಪರ ಪ್ರಚಾರ ನಡೆಸಿದ್ದರೆನ್ನಲಾಗಿದೆ. ನಿನ್ನೆ ರಾತ್ರಿ ನಾಸಿರ್ ಅವರು ಮೆಡಿಕಲ್ ಶಾಪ್ ಗೆ ಔಷಧಿ ಕೊಳ್ಳಲು ತೆರಳಿದ್ದ ವೇಳೆ ಬೋಳಿಯಾರ್ ಮದಕ ಜಂಕ್ಷನ್ ನಲ್ಲಿ SDPI ಕಾರ್ಯಕರ್ತರಾದ ಮೋನು, ರಝಾಕ್, ರಫೀಕ್ ಮತ್ತು ತಂಡ ಮರದ ಸೋಂಟೆಯಲ್ಲಿ ಹಲ್ಲೆ ನಡೆಸಿದ್ದಾರೆ.
ಗಾಯಾಳು ನಾಸಿರ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here