ಮಾಜಿ ಉದ್ಯೋಗಿಯ ಅರೋಗ್ಯ ವಿಚಾರಿಸುವುದಕ್ಕಾಗಿ ರತನ್ ಜಿ ಮುಂಬೈನಿಂದ ಪುಣೆಗೆ

ದೇಶದ ಜಾಗತಿಕ ಉದ್ಯಮಿ ಟಾಟಾ ಸಂಸ್ಥೆಯ ಒಡೆಯ ರತನ್ ಟಾಟಾ ಮಾನವೀಯ ಕಳಕಳಿಗೆ ಹೆಸರಾದವರು.ದೈತ್ಯ ಉದ್ಯಮಿ ಎನಿಸಿಕೊಂಡರೂ ಸರಳವಾಗಿ ಬದುಕಬೇಕು.ಮಾನವೀಯ ನೆಲೆಯಲ್ಲಿ ಯೋಚಿಸಬೇಕೆಂಬ ಎಂಬ ತುಡಿತವೇ ಅವರನ್ನು ಜಾಗತಿಕ ಮಹಾನ್ ಸಾಧಕರ ಸಾಲಿನಲ್ಲಿ ತಂದು ನಿಲ್ಲಿಸಿದೆ.
ಅನಾರೋಗ್ಯಕ್ಕೀಡಾದ ಮಾಜಿ ಉದ್ಯೋಗಿಯ ಅರೋಗ್ಯ ವಿಚಾರಿಸುವುದಕ್ಕಾಗಿ ರತನ್ ಜಿ ಮುಂಬೈನಿಂದ ಪುಣೆಗೆ ತೆರಳಿದ್ದು ಅವರ ಈ ನಡೆಗೆ ದೇಶಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.ಕಳೆದ ಎರಡು ವರ್ಷಗಳಿಂದ ಉದ್ಯೋಗಿಗೆ ಆರೋಗ್ಯ ಸರಿಯಿರಲಿಲ್ಲ ಎಂಬ ಮಾಹಿತಿ ಟಾಟಾ ಅವರಿಗೆ ತಲುಪಿದ ತಕ್ಷಣವೇ ಉದ್ಯೋಗಿ ವಾಸಿಸುತ್ತಿದ್ದ ಮನೆಗೆ ಅನಿರೀಕ್ಷಿತ ಭೇಟಿ ನೀಡಿ ಸ್ಪಂದಿಸಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ.
ರತನ್ ಟಾಟಾ ಅವರಿಗೆ ಈಗ ೮೩ ವರುಷ ವಯಸ್ಸು.ಇಳಿವಯಸ್ಸಿನಲ್ಲಿ ಮಾಜಿ ಉದ್ಯೋಗಿಯ ಆರೋಗ್ಯ ವಿಚಾರಿಸಲು ತೆರಳಿದ ಅವರ ಹೃದಯ ವೈಶಾಲ್ಯತೆಯನ್ನು ವರ್ಣಿಸಲು ನನ್ನಲ್ಲಿ ಪದಗಳಿಲ್ಲ.ಹಣ, ಆಸ್ತಿ, ಅಂತಸ್ತಿಗಿಂತಲೂ ಮಾನವೀಯತೆ ದೊಡ್ಡದು. ಅಂಥ ಮಾನವೀಯತೆಯೇ ಮೂರ್ತಿವೆತ್ತಂತಿರುವ ರತನ್ ಟಾಟಾ ನಿಜಕ್ಕೂ ಗೌರವಾರ್ಹರು ಎಂದು ಹೇಳಲು ಹೃದಯ ತುಂಬಿ ಬರುತ್ತದೆ.


ರತನ್ ಜಿ ತಾವು ದೇಶದ ಹೆಮ್ಮೆ ಅಷ್ಟೇ ಅಲ್ಲ ಉದ್ಯೋಗಿಗಳ ಪಾಲಿಗೆ ಅನ್ನದಾತ ಕೂಡ ಹೌದು.ತಮ್ಮ ಉದ್ಯಮದಲ್ಲಿ ಲಕ್ಷಾಂತರ ಉದ್ಯೋಗಿಗಳ ಮಧ್ಯೆಯೂ ಒಬ್ಬ ಸಾಮಾನ್ಯ ನೌಕರನಿಗೆ ತಾವು ತೋರಿದ ಕಾಳಜಿ ಉದ್ಯಮ ರಂಗದಲ್ಲಿ ಅನುಕರಣೀಯ.ಯಾವ ರಕ್ಷಣೆಯಿಲ್ಲದೆ ಶ್ರೀಸಾಮಾನ್ಯನಂತೆ ಬಂದು ಅವರ ಮನೆಯಲ್ಲಿ ತಂದೆ ತಾಯಿಗಳೊಂದಿಗೆ ಬೆರೆತು ಊಟಮಾಡಿಕೊಂಡು ಹೋಗುವುದಿದೆಯಲ್ಲ ಅಂತಹ ಹೃದಯ ವೈಶಾಲ್ಯತೆಗೆ ಬೆಲೆ ಕಟ್ಟಲಾಗದು.ಹಾಗಾಗಿ ಈ ಸೌಜನ್ಯಯುತ ತಮ್ಮ ನಡೆಗೆ ನನ್ನದೊಂದು ಅಭಿಮಾನದ ಸಲಾಂ.

LEAVE A REPLY

Please enter your comment!
Please enter your name here