ಬೆಂಗಳೂರಿನಲ್ಲಿ 2025ರ ವೇಳೆಗೆ 172 ಕಿ.ಮೀ. ಮೆಟ್ರೊ ಜಾಲ ನಿರ್ಮಾಣ ಮಾಡಲಾಗುವುದು – ಸಿಎಂ ಬಿ.ಎಸ್‌.ಯಡಿಯೂರಪ್ಪ

“ಕೋಣನಕುಂಟೆ ಕ್ರಾಸ್‌ನಿಂದ ರೇಷ್ಮೆ ಸಂಸ್ಥೆಯ ತನಕ ನಮ್ಮ ಮೆಟ್ರೊದಲ್ಲಿ 6 ಕಿ.ಮೀ. ಮೆಟ್ರೊ ರೈಲು ಮಾರ್ಗ ವಿಸ್ತರಿಸುವುದರ ಜೊತೆಗೆ ದೇಶದ 18 ಜಿಲ್ಲೆಗಳಲ್ಲಿ 700 ಕಿ.ಮೀ. ಮೆಟ್ರೊ ಜಾಲ ರೂಪಿಸಲಾಗಿದೆ” ಎಂದು ಕೇಂದ್ರ ವಸತಿ ಹಾಗೂ ನಗರಾಭಿವೃದ್ದಿ ರಾಜ್ಯ ಸಚಿವ ಹರ್‌ದೀಪ್‌‌‌ ಸಿಂಗ್‌‌‌ ಪುರಿ ತಿಳಿಸಿದರು.

ಗುರುವಾರ ರೀಚ್ 4ಬಿ ವಿಸ್ತರಿತ ಮಾರ್ಗಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, “ಸಾರ್ವಜನಿಕ ಹೂಡಿಕೆ ಮಂಡಳಿಗೆ, ಸಿಲ್ಕ್‌‌ ಬೋರ್ಡ್‌ನಿಂದ ವಿಮಾನ ನಿಲ್ದಾಣದ ತನಕ ಮೆಟ್ರೊ ಮಾರ್ಗ ನಿರ್ಮಾಣದ ಸಲುವಾಗಿ ಪ್ರಸ್ತಾವ ಸಲ್ಲಿಸಲಾಗಿದೆ. ಇದರ ಪ್ರಕ್ರಿಯೆ ಪ್ರಗತಿಯಲ್ಲಿದೆ” ಎಂದು ಹೇಳಿದರು.

ಬಳಿಕ ಮಾತನಾಡಿದ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು, “ಬೆಂಗಳೂರಿನಲ್ಲಿ 2025ರ ವೇಳೆಗೆ 172 ಕಿ.ಮೀ. ಮೆಟ್ರೊ ಜಾಲ ನಿರ್ಮಾಣ ಮಾಡಲಾಗುವುದು” ಎಂದು ತಿಳಿಸಿದರು.

LEAVE A REPLY

Please enter your comment!
Please enter your name here