ಕೊರೊನಾ ವೈರಸ್‌‌ ಸಾಂಕ್ರಾಮಿಕದ ಮೂಲದ ಬಗ್ಗೆ ತನಿಖೆ ನಡೆಸಲು WHO ತಂಡ ವುಹಾನ್‌‌‌ಗೆ

TOPSHOT - A bus carrying members of the World Health Organization (WHO) team investigating the origins of the Covid-19 pandemic leaves the airport following their arrival at a cordoned-off section in the international arrivals area at the airport in Wuhan on January 14, 2021. (Photo by NICOLAS ASFOURI / AFP) (Photo by NICOLAS ASFOURI/AFP via Getty Images)

ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡವು ಕೊರೊನಾ ವೈರಸ್‌‌ ಸಾಂಕ್ರಾಮಿಕದ ಮೂಲದ ಬಗ್ಗೆ ತನಿಖೆ ನಡೆಸುವ ಸಲುವಾಗಿ ಗುರುವಾರ ಚೀನಾದ ವುಹಾನ್‌‌‌ಗೆ ಆಗಮಿಸಿದೆ.

ಕೊರೊನಾ ವೈರಸ್‌‌ ಸಾಂಕ್ರಾಮಿಕದ ಮೂಲದ ಬಗ್ಗೆ ತನಿಖೆ ನಡೆಸಲು ಆರಂಭದಲ್ಲಿ ಚೀನಾ ಹಿಂದೇಟು ಹಾಕಿತ್ತು. ಆದರೆ, ಭಾರಿ ಚರ್ಚೆಯ ನಂತರ ವುಹಾನ್‌‌ನಲ್ಲಿ ತನಿಖೆ ನಡೆಸಲು ಒಪ್ಪಿಗೆ ಸೂಚಿಸಿದೆ.

ಜೀವಂತ ಹಾವು, ಪ್ರಣಿ-ಪಕ್ಷಿಗಳನ್ನು ಚೀನಾದ ಮಾರುಕಟ್ಟೆಯೊಂದರಲ್ಲಿ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ಮಾನವನಿಗೆ ವೈರಸ್‌‌‌ ಹರಡಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆ ಕಳೆದ ವರ್ಷದಿಂದ ಆ ಮಾರುಕಟ್ಟೆಯನ್ನು ಮುಚ್ಚಲಾಗಿದೆ.

ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಉಪ ಮುಖ್ಯಸ್ಥ ಝೆಂಗ್ ಯಿಕ್ಸಿನ್‌ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, “ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡವು ಜ.14ರಂದು ಯಾವ ಸಮಯಕ್ಕೆ ಚೀನಾಕ್ಕೆ ಆಗಮಿಸಲಿದೆ ಎನ್ನುವ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆದರೆ, ಪರಿಶೀಲನೆ ನಡೆಸುವ ಹಿನ್ನೆಲೆ ನಾಲ್ಕು ವಿಡಿಯೋ ಕಾನ್ಫರೆನ್ಸ್‌‌ ಸೇರಿ ನಿಗದಿತವಾದ ವ್ಯವಸ್ಥೆಗಳನ್ನು ಕೈಗೊಂಡಿದ್ದೇವೆ” ಎಂದು ತಿಳಿಸಿದ್ದರು.

LEAVE A REPLY

Please enter your comment!
Please enter your name here