ಗಾಬಾ ಕೋಟೆ ಭೇದಿಸಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ಟೀಮ್ ಇಂಡಿಯಾ

ಆಸ್ಟ್ರೇಲಿಯಾವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವನ್ನು ಸಾಧಿಸಿ ಐತಿಹಾಸಿಕ ಸರಣಿ ಗೆಲುವು ಸಾಧಿಸಿದೆ. ಈ ಮೂಲಕ ಕಳೆದ ಮೂರು ದಶಕಗಳಿಂದ ಅಬೇಧ್ಯವಾಗಿದ್ದ ಗಾಬಾದಲ್ಲಿ ಆಸ್ಟ್ರೇಲಿಯನ್ನರಿಗೆ ಮರೆಯಲಾಗದ ಸೋಲುಣಿಸಿದೆ. 1-1 ರಿಂದ ಸಮಬಲಗೊಂಡಿದ್ದ ಈ ಸರಣಿಯನ್ನು ಗೆಲ್ಲಬೇಕಾದರೆ ಎರಡು ತಂಡಗಳಿಗೂ ಈ ಪಂದ್ಯದ ಗೆಲುವು ಮುಖ್ಯವಾಗಿತ್ತು. ಆದರೆ ಈ ಪಂದ್ಯದಲ್ಲಿ ಸಂಪೂರ್ಣ ಹಿಡಿತವನ್ನು ಸಾಧಿಸಿದ ಟೀಮ್ ಇಂಡಿಯಾ ಅಂತಿಮ ಹಂತದವರೆಗೂ ಪಟ್ಟು ಸಡಿಲಿಸದೆ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಅಜಿಂಕ್ಯ ರಹಾನೆ ನೇತೃತ್ವದ ಟೀಮ್ ಇಂಡಿಯಾ ಗಾಬಾ ಅಂಗಳದಲ್ಲಿ ಆಸ್ಟ್ರೇಲಿಯಾ ಗೆಲುವಿನ ಸರಪಳಿಯನ್ನು ತುಂಡರಿಸಿದೆ.

ಸುಂದರ್ ವಿಕೆಟ್ ಕಳೆದುಕೊಂಡ ಬಳಿಕ ಶಾರ್ದೂಲ್ ಠಾಕೂರ್ ಕೂಡ 2 ರನ್‌ಗಳಿಸಿ ಔಟ್ ಆದರು ಕೂಡ ಔಟಾದರೂ ಅದಾಗಲೇ ತಂಡ ಗೆಲುವಿನಂಚಿನಲ್ಲಿತ್ತು. ಅಂತ್ಯದಲ್ಲಿ ಬೌಂಡರಿ ಸಿಡಿಸುವ ಮೂಲಕ ರಿಷಭ್ ಪಂತ್ ಗೆಲುವನ್ನು ಘೋಷಿಸಿದರು. ರಿಷಭ್ ಪಂತ್ 89 ರನ್ ಗಳಿಸಿ ಭಾರತ ತಂಡದ ಜಯದಲ್ಲಿ ಮಹತ್ವದ ಪಾತ್ರವಹಿಸಿದರು. ಈ ಮೂಲಕ ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಸರಣಿ ಗೆಲುವು ಸಾಧಿಸಿ ಗೆದ್ದು ಬೀಗಿದೆ. ಸುಂದರ್ ವಿಕೆಟ್ ಕಳೆದುಕೊಂಡ ಬಳಿಕ ಶಾರ್ದೂಲ್ ಠಾಕೂರ್ ಕೂಡ 2 ರನ್‌ಗಳಿಸಿ ಔಟ್ ಆದರು ಕೂಡ ಔಟಾದರೂ ಅದಾಗಲೇ ತಂಡ ಗೆಲುವಿನಂಚಿನಲ್ಲಿತ್ತು. ಅಂತ್ಯದಲ್ಲಿ ಬೌಂಡರಿ ಸಿಡಿಸುವ ಮೂಲಕ ರಿಷಭ್ ಪಂತ್ ಗೆಲುವನ್ನು ಘೋಷಿಸಿದರು. ರಿಷಭ್ ಪಂತ್ 89 ರನ್ ಗಳಿಸಿ ಭಾರತ ತಂಡದ ಜಯದಲ್ಲಿ ಮಹತ್ವದ ಪಾತ್ರವಹಿಸಿದರು. ಈ ಮೂಲಕ ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಸರಣಿ ಗೆಲುವು ಸಾಧಿಸಿ ಗೆದ್ದು ಬೀಗಿದೆ.

LEAVE A REPLY

Please enter your comment!
Please enter your name here