ಚೀನಾದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಏಕಾಏಕಿ ಹೆಚ್ಚಳ – ಒಂದೇ ವಾರದಲ್ಲಿ ಬೃಹತ್ ಕ್ವಾರೆಂಟೈನ್

ನಾಲ್ಕು ಸಾವಿರಕ್ಕೂ ಅಧಿಕ ಜನರು ಒಟ್ಟಿಗೆ ನೆಲೆಸಬಹುದಾದ ಬೃಹತ್ ಕ್ವಾರೆಂಟೈನ್ ಶಿಬಿರವನ್ನು ಸ್ಥಾಪಿಸಲು ಚೀನಾ ಮುಂದಾಗಿದೆ. ಚೀನಾದಲ್ಲಿ ಕಡಿಮೆಯಾಗಿದ್ದ ಕೊರೊನಾ ವೈರಸ್ ಪ್ರಕರಣಗಳು ಏಕಾಏಕಿ ಹೆಚ್ಚಳವಾಗುತ್ತಿದ್ದು, ಲಕ್ಷಾಂತರ ಜನರನ್ನು ಮತ್ತೆ ಕಠಿಣ ಲಾಕ್‌ಡೌನ್‌ಗೆ ಒಳಪಡಿಸಲಾಗಿದೆ. ಅದರ ಬೆನ್ನಲ್ಲೇ ಚೀನಾ ಸರ್ಕಾರ ತರಾತುರಿಯಲ್ಲಿ ಕ್ವಾರೆಂಟೈನ್ ಕೇಂದ್ರ ನಿರ್ಮಾಣಕ್ಕೆ ಕೈ ಹಾಕಿದೆ.

ರಾಷ್ಟ್ರದ ರಾಜಧಾನಿ ಬೀಜಿಂಗ್ ಸುತ್ತಮುತ್ತಲಿನ ಹೆಬಿ ಪ್ರಾಂತ್ಯದ ರಾಜಧಾನಿ ಶಿಜಿಯಾಜುವಾಂಗ್‌ನ ಹೊರವಲಯದಲ್ಲಿ ಈ ಕ್ವಾರೆಂಟೈನ್ ಶಿಬಿರವಿದೆ. ಕೊರೊನಾ ವೈರಸ್ ಸೋಂಕು ಹರಡಲು ಆರಂಭಿಸಿದ ಸಂದರ್ಭದಲ್ಲಿ ಹತ್ತೇ ದಿನದಲ್ಲಿ ಬೃಹತ್ ಆಸ್ಪತ್ರೆಯನ್ನೇ ಚೀನಾ ನಿರ್ಮಿಸಿತ್ತು.

ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆಯುಳ್ಳ ಚೀನಾ, ತನ್ನ ಇತರೆ ಭಾಗಗಳಿಗೆ ವೈರಸ್ ಹರಡುವುದನ್ನು ಯಶಸ್ವಿಯಾಗಿ ನಿಯಂತ್ರಿಸಿತ್ತು. ದೇಶ ಹೆಚ್ಚೂ ಕಡಿಮೆ ಸಹಜ ಸ್ಥಿತಿಗೆ ಮರಳಿತ್ತು. ಆದರೆ ಬೀಜಿಂಗ್ ಸುತ್ತಮುತ್ತಲಿನ ಪ್ರದೇಶ, ಹಳ್ಳಿಗಳಲ್ಲಿ ಹಠಾತ್ತಾಗಿ ಪ್ರಕರಣಗಳು ಏರಿಕೆಯಾಗಿರುವುದು ಸರ್ಕಾರಕ್ಕೆ ಆತಂಕ ಮೂಡಿಸಿದೆ. ಚೀನಾದ ಅತ್ಯಂತ ಪ್ರಮುಖ ವಾರ್ಷಿಕ ಹಬ್ಬ ಚಾಂದ್ರಮಾನ ಹೊಸ ವರ್ಷ ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ತಮ್ಮ ಕುಟುಂಬದವರನ್ನು ಭೇಟಿ ಮಾಡಲು ತೆರಳುತ್ತಾರೆ. ಹೀಗಾಗಿ ಹಬ್ಬದ ವೇಳೆ ವೈರಸ್ ವ್ಯಾಪಕವಾಗಿ ಹರಡುವ ಅಪಾಯವಿದ್ದು, ಅದಕ್ಕೂ ಮೊದಲೇ ಲಾಕ್‌ಡೌನ್ ಜಾರಿಗೆ ತರಲಾಗಿದೆ.

ನಾಲ್ಕು ಸಾವಿರಕ್ಕೂ ಅಧಿಕ ಕಟ್ಟಡ ನಿರ್ಮಾಣ ಕೆಲಸಗಾರರು ಆರು ದಿನಗಳಲ್ಲಿ ಹಗಲು-ರಾತ್ರಿ ಕೆಲಸ ಮಾಡಿದ್ದು, ಸುಮಾರು 4,160 ಮಂದಿ ಇದರಲ್ಲಿ ಇರಬಹುದಾಗಿದೆ. ಕೋವಿಡ್-19 ಸೋಂಕು ದೃಢಪಟ್ಟ ರೋಗಿಗಳೊಂದಿಗೆ ನೇರ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳನ್ನು ಈ ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಲಾಗುತ್ತದೆ. ಸಂಪರ್ಕಿತರನ್ನು ಹುಡುಕಲು ಮತ್ತು ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.

ಜನವರಿ 13ರಂದು ಕೇಂದ್ರ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಅದರ ಮೊದಲ ಹಂತ ಈಗಾಗಲೇ ಬಳಕೆಗೆ ಲಭ್ಯವಾಗಿದೆ. ಎರಡನೆಯ ಹಂತದ ಕಾಮಗಾರಿ ಕೂಡ ನಡೆಯುತ್ತಿದೆ. ಈ ಕೇಂದ್ರವು ವಿಶೇಷ ಸ್ನಾನದ ಕೊಠಡಿ, ಪೀಠೋಪಕರಣಗಳು, ಹಾಸಿಗೆ, ವೈಫೈ, ಟೆಲಿವಿಷನ್ ಮುಂತಾದವು ಇರಲಿದೆ.

SHIJIAZHUANG, Jan. 18, 2021 — Aerial photo taken on Jan. 18, 2021 shows the Huangzhuang apartment COVID-19 quarantine center under construction in Shijiazhuang, north China’s Hebei Province. Construction of the main structures of the Huangzhuang apartment COVID-19 quarantine center in Shijiazhuang is nearing the end. With a total floor area of 34 hectares, the facility will house close contacts or secondary close contacts of COVID-19 confirmed cases. (Photo by Yang Shiyao/Xinhua via Getty) (Xinhua/Yang Shiyao via Getty Images)

LEAVE A REPLY

Please enter your comment!
Please enter your name here