ಬಿ.ಸಿ ರೋಡಿನಲ್ಲಿ ಸೌಹಾರ್ಧತೆ ಕಹಳೆ ಮೊಳಗಿಸಿದ ಎಸ್ಕೆಎಸ್ಸೆಸ್ಸೆಫ್

ಬಂಟ್ವಾಳ: ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ರಾಷ್ಟ್ರ ರಕ್ಷಣೆಗೆ ಸೌಹಾರ್ಧತೆಯ ಸಂಕಲ್ಪ ಎಂಬ ಘೋಷ ವಾಕ್ಯದೊಂದಿಗೆ ಗಣರಾಜ್ಯೋತ್ಸವದ ಪ್ರಯುಕ್ತ ಮಾನವ ಸರಪಳಿಯು ಬಿ.ಸಿ ರೋಡಿನ ಕೈಕಂಬ ಪೂಂಜಾ ಮೈದಾನದಲ್ಲಿ ಜರಗಿತು.
ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಮನೆಯಿಂದ ಮೈದಾನದ ತನಕ ಸೌಹಾರ್ದ ಕಾಲ್ನಡಿಗೆ ಜಾಥ ನಡೆಯಿತು.
ಸಮಾವೇಶದಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸೆಯ್ಯೆದ್ ಅಮೀರ್ ತಂಙಲ್ ಅಧ್ಯಕ್ಷತೆ ವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಸಮಸ್ತ ಮುಶಾವರ ಸದಸ್ಯ ಬಿ.ಕೆ ಅಬ್ದುಲ್ ಖಾದರ್ ಮುಸ್ಲಿಯಾರ್, ಸೆಯ್ಯದ್ ಝೈನುಲ್ ಆಭಿದೀನ್ ತಂಙಲ್ ಬೆಳ್ತಂಗಡಿ, ಶಾಸಕ ಯು.ಟಿ ಖಾದರ್, ಮಾಜಿ ಸಚಿವ ರಮನಾಥ ರೈ ಸಭೆಯನ್ನುದ್ದೇಶಿಸಿ ಮಾತನಾಡಿದರು.


ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿ ಉಪಾಧ್ಯಕ್ಷ ಸೆಯ್ಯದ್ ಫಕ್ರುದ್ದೀನ್ ತಂಙಳ್ ತಾಣೂರು
ಯುವ ವಾಗ್ಮಿ ಇಕ್ಬಾಲ್ ಬಾಳಿಲ ಮುಖ್ಯ ಪ್ರಭಾಷಣ ನಡೆಸಿದರು.
ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಮಾನವ ಸರಪಳಿ ನಡೆಸಿ ಸೌಹಾರ್ಧತೆ ಪ್ರತಿಜ್ಞೆ ಮಾಡಿದರು.
ಅಲ್ಪಸಂಖ್ಯಾತ ಅನುದಾನ ಕಡಿತವನ್ನು ವಿರೋಧಿಸಿ, ಮತ್ತು ರೈತರ ಹೋರಾಟಕ್ಕೆ ನ್ಯಾಯ ಓದಗಿಸುವಂತೆ ನಿರ್ಣಯ ಮಂಡಿಸಲಾಯಿತು.


ವೇದಿಕೆಯಲ್ಲಿ ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಕಾರ್ಯದರ್ಶಿ ಕಾಸಿಂ ದಾರಿಮಿ, ಬಂಟ್ವಾಳ ಪುರಸಭೆ ಅಧ್ಯಕ್ಷ ಶರೀಫ್ ಶಾಂತಿಯಂಗಡಿ, ಮಿತ್ತಬೈಲ್ ಮಸೀದಿ ಅಧ್ಯಕ್ಷ ಮುಹಮ್ಮದ್ ಸಾಗರ್, ಬಂಟ್ವಾಳ ವಲಯ ಅಧ್ಯಕ ಇರ್ಷಾದ್ ದಾರಿಮಿ ಮಿತ್ತಬೈಲ್, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಅಶ್ರಫ್ ಫೈಝಿ ಮಿತ್ತಬೈಲ್, ಉಮರುಲ್ ಫಾರೂಖ್ ಫೈಝಿ, ಡಾಕ್ಟರ್ ಶಕೀಲ್, ಟಿ.ಎಂ ಶಹೀದ್, ಮೊದಲಾದ ಸಾಮಾಜಿಕ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ಸ್ವಾಗತಿಸಿ, ರಶೀದ್ ರಹ್ಮಾನಿ ವಂದಿಸಿದರು

LEAVE A REPLY

Please enter your comment!
Please enter your name here