SSF ಉಜಿರೆ ಯೂನಿಟ್ ವಾರ್ಷಿಕ ಮಹಾಸಭೆ – ಅಧ್ಯಕ್ಷರಾಗಿ ಶಫೀಕ್ ಉಜರೆ ಆಯ್ಕೆ

0
162

ಬೆಳ್ತಂಗಡಿ : SSF ಉಜಿರೆ ಯೂನಿಟ್ ವಾರ್ಷಿಕ ಮಹಾಸಭೆ ಮುಹಿಯುದ್ದೀನ್ ಜುಮಾ ಮಸೀದಿ ಹಳೇಪೇಟೆ ಮದರಸ ಹಾಲ್ ನಲ್ಲಿ ಶಾಕಿರ್ ರವರ ನೇತೃತ್ವದಲ್ಲಿ ವಾರ್ಷಿಕ ಮಹಾಸಭೆಯು ನಡೆಯಿತು.. SSF ಉಜಿರೆ ಸೆಟ್ಟರ್ ಕಾರ್ಯದರ್ಶಿಗಳಾದ ಸಲೀಂ ನಿಡಿಗಲ್ ಉಪಸ್ಥಿತರಿದ್ದರು. SSF ಉಜಿರೆ ಯೂನಿಟ್ ಅಧ್ಯಕ್ಷರಾದ ಶಾಕಿರ್ ಸ್ವಾಗತ ಕೋರಿದರು.

SSF ಉಜಿರೆ ಸೆಕ್ಟರ್ ಕಾರ್ಯದರ್ಶಿಗಳಾದ ಸಲೀಂ ನಿಡಿಗಲ್ SSF ಸಂಘಟನೆ ಯಾವ ರೀತಿ ಉದಯವಾಯಿತು ಹೇಗೆ ಸಂಘಟನೆಯಲ್ಲಿ ಕಾರ್ಯನಿರ್ವಹಿಸಬೇಕು ಹಾಗೂ SSF ಸಂಘಟನೆಯ ಇತರ ವಿಷಯಗಳ ಕುರಿತು ಕಾರ್ಯಕರ್ತರಿಗೆ ತಿಳಿಸಿದರು…

SSF ಉಜಿರೆ ಯೂನಿಟ್ ಪ್ರಧಾನ ಕಾರ್ಯದರ್ಶಿಗಳಾದ ಶಿಹಾರ್ ರವರು ಅರ್ಧವಾರ್ಷಿಕ ಸಭೆಯ ಬಳಿಕದ ಎಲ್ಲಾ ವರದಿಯನ್ನು ಕಾರ್ಯಕರ್ತರ ಮುಂದೆ ಮಂಡನೆ ಮಾಡಿದರು..

SSF ಉಜಿರೆ ಯೂನಿಟ್ ಕೋಶಾಧಿಕಾರಿ ಮಿಸಾದ್ ಎಸ್ ಎ ಅರ್ಧವಾರ್ಷಿಕ ಸಭೆಯ ಬಳಿಕದ ಎಲ್ಲ ಲೆಕ್ಕವನ್ನು ಮಂಡಿಸಿದರು…

ಮೇಲ್ ಘಟಕದಿಂದ ಚುನಾವಣಾಧಿಕಾರಿಗಳಾಗಿ ಬಂದಂತಹ ಸಲೀಂ ನಿಡಿಗಲ್ ಇವರ ನೇತೃತ್ವದಲ್ಲಿ ನೂತನ ಸಮಿತಿ ರಚಿಸಲಾಯಿತು..

ನೂತನ ಪದಾಧಿಕಾರಿಗಳು.

ಅಧ್ಯಕ್ಷರು :- ಶಫೀಕ್ ಉಜರೆ
ಪ್ರ.ಕಾರ್ಯದರ್ಶಿ :- ಅಝೀಮ್ S.A
ಕೋಶಾಧಿಕಾರಿ :- ಸಲ್ಮಾನ್ S.A

ಜೊತೆ ಕಾರ್ಯದರ್ಶಿಗಳು :-
1 ಶಿಯಾಬ್ S.A
2 ಶಹೀರ್ S.A
3 ಮನ್ಸೂರ್
4 ಆಶಿರ್
5 ಮುಝಮ್ಮಿಲ್
6 ಸಿಯಾನ್

SSF ಉಜಿರೆ ಯೂನಿಟ್ ನಿಂದ ಸೆಕ್ಟರ್ ಕೌನ್ಸಿಲರಾಗಿ
1 ಮಿಸಾದ್ S.A
2 ಶಾಕೀರ್
3 ಝಹಿದ್
4 ಸಿಯಾರ್

ನೂತನ ಕಮಿಟಿ ರಚಿಸಿದ ಬಳಿಕ ಹಳೇ ಕಮಿಟಿಯು SSF ತ್ರಿವರ್ಣಧ್ವಜ ಹಾಗೂ ಲೆಕ್ಕ ಪುಸ್ತಕವನ್ನು ನೂತನ ಕಮಿಟಿಗೆ ಹಸ್ತಾಂತರಿಸಿದರು. ನೂತನ ಅಧ್ಯಕ್ಷರಾದ ಶಫೀಕ್ ಉಜಿರೆ ನಮ್ಮ ಅಧಿಕಾರ ಅವಧಿಯಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಟಗೊಳಿಸಲು ಸರ್ವ ಕಾರ್ಯಕರ್ತರೊಂದಿಗೆ ಸಹಕಾರ ಯಾಚಿಸಿದರು. ನೂತನ ಕಮಿಟಿಯ ಪ್ರಧಾನ ಕಾರ್ಯದರ್ಶಿ ಅಝೀಮ್ S.A ಸರ್ವರಿಗೂ ಧನ್ಯವಾದ ತಿಳಿಸಿದರು..