SSLC ಫಲಿತಾಂಶ ಪ್ರಕಟ ಬೆನ್ನಲ್ಲೇ PUC ಪ್ರವೇಶ ಪ್ರಕ್ರಿಯೆ ಆರಂಭ

0
184

ಬೆಂಗಳೂರು,ಆ.11- ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾದ ದಿನದಿಂದಲೇ ಪಿಯುಸಿ ಪ್ರವೇಶ ಪ್ರಕ್ರಿಯೆಗೆ ಆರಂಭಗೊಂಡಿದ್ದು, ಆಗಸ್ಟ್ 31ರವರೆಗೆ ಮುಂದುವರಿಯಲಿದೆ. ಇದೇ ಸಮಯದಲ್ಲಿಯೇ ವಿದ್ಯಾರ್ಥಿಗಳು ತಮ್ಮ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆಗಸ್ಟ್ 16ರಿಂದ ಆನ್‍ಲೈನ್ ತರಗತಿಗಳು ಕೂಡ ಪ್ರಾರಂಭವಾಗಲಿವೆ.

ಆಗಸ್ಟ್ 31ರ ನಂತರ ಪ್ರವೇಶ ಪಡೆದವರಿಗೆ ಇಲಾಖೆ ದಂಡ ವಿಧಿಸಲಿದೆ. ಸೆಪ್ಟೆಂಬರ್ 1ರಿಂದ 11ರವರೆಗೆ ಪ್ರವೇಶ ಪಡೆದವರಿಗೆ 670 ರೂ., ಸೆಪ್ಟೆಂಬರ್ 13ರಿಂದ 25ರವರೆಗೆ ಪ್ರವೇಶ ಪಡೆದವರಿಗೆ 2 ,890 ರೂ. ದಂಡ ವಿಧಿಸಲಾಗುತ್ತದೆ. ವಿದ್ಯಾರ್ಥಿಗಳು ಪ್ರವೇಶ ಪಡೆದು ಶುಲ್ಕ ಪಾವತಿಸಿದ ದಿನವೇ ಕಾಲೇಜುಗಳು ಇಲಾಖೆಗೆ ಶುಲ್ಕ ಪಾವತಿಸಬೇಕಾಗುತ್ತದೆ.

ಈ ಮಧ್ಯೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಗೆ ಪತ್ರ ಬರೆದಿರುವ ಅನುದಾನರಹಿತ ಖಾಸಗಿ ಶಾಲೆಗಳ ವ್ಯವಸ್ಥಾಪಕ ಒಕ್ಕೂಟ(ರೂಪ್ಸ), ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಪಿಯುಸಿ ಅಥವಾ ಅದಕ್ಕೆ ಸಮನಾದ ಶಿಕ್ಷಣಕ್ಕೆ ಪ್ರವೇಶಾತಿ ಕಲ್ಪಿಸಬೇಕೆಂದು ಕೋರಿದೆ.

ಈ ಸಂಬಂಧ ಸರ್ಕಾರಕ್ಕೆ ಎರಡು ಬಾರಿ ಪತ್ರ ಬರೆಯಲಾಗಿದೆ. ಕಳೆದ ವರ್ಷ ಕೇವಲ 6.23 ಲಕ್ಷ ವಿದ್ಯಾರ್ಥಿಗಳಿಗೆ ಪಿಯು ಕಾಲೇಜುಗಳಲ್ಲಿ ಪ್ರವೇಶಾತಿ ಕಲ್ಪಿಸಲಾಗಿತ್ತು. ಈ ವರ್ಷ 8.7 ಲಕ್ಷ ರಾಜ್ಯ ಸರ್ಕಾರದ ಪಠ್ಯಕ್ರಮದಡಿ 10ನೇ ತರಗತಿ ತೇರ್ಗಡೆ ಹೊಂದಿದ್ದು 12 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶ ಕೋರುವ ಸಾಧ್ಯತೆಯಿದೆ.

ಅಲ್ಲದೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ ಹೆಚ್ಚುವರಿ 3 ಲಕ್ಷ ವಿದ್ಯಾರ್ಥಿಗಳಿಗೆ ಸಹ ಪಿಯುಸಿಗೆ ಪ್ರವೇಶ ಕೋರಲಾಗಿದೆ. ಪಿಯುಸಿ ಕಾಲೇಜಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನಿಯಮಿತ ಸಂಖ್ಯೆಯಿದ್ದರೂ ಪ್ರಸ್ತುತ ಸಾವಿರದ 234 ಕಾಲೇಜುಗಳಿವೆ. ಪ್ರಸ್ತುತ 6 ಸಾವಿರದ 250 ಖಾಯಂ ಉಪನ್ಯಾಸಕರಿದ್ದಾರಷ್ಟೆ. ಹೆಚ್ಚಿನ ಸಂಖ್ಯೆಯಲ್ಲಿ ಉಪನ್ಯಾಸಕರನ್ನು ನೇಮಕಾತಿ ಮಾಡಬೇಕು ಎಂದು ತಾಳಿಕಟ್ಟೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.