ಕರಾವಳಿಮಂಗಳೂರು

ಅಲ್ಪಸಂಖ್ಯಾತ ಇಲಾಖೆಗೆ ಮಲತಾಯಿ ಧೋರಣೆ : ಸರಕಾರದ ವಿರುದ್ಧ ಮಂಗಳೂರಿನ ಸುಮತಿ ಎಸ್ ಹೆಗ್ಡೆ ಆಕ್ರೋಶ

ಮಂಗಳೂರು: “ಅಲ್ಪಸಂಖ್ಯಾತರ ವಿರುದ್ಧ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಅಲ್ಪಸಂಖ್ಯಾತ ಇಲಾಖೆಗಳಿಗೆ ಅನುದಾನ ತೀವ್ರ ಕಡಿತ ಮಾಡಲಾಗಿದೆ. ನಿಮಗೆ ಅಲ್ಪಸಂಖ್ಯಾತರ ಮೇಲೆ ಏಕೆ ಇಷ್ಟು ದ್ವೇಷ?” ಎಂದು ದ.ಕ. ಜೆಡಿಎಸ್ ಮಹಿಳಾ ಜಿಲ್ಲಾಧ್ಯಕ್ಶರಾದ ಸುಮತಿ ಎಸ್ ಹೆಗ್ಡೆ ಇವರು ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

“ದಯವಿಟ್ಟು ಆ ಇಲಾಖೆಗೆ ಒಬ್ಬ ಅಲ್ಪಸಂಖ್ಯಾತ ಸಮುದಾಯದವರನ್ನು ಮಂತ್ರಿ ಮಾಡಿ. ನಿಮ್ಮ ಪಕ್ಷದಲ್ಲಿ ಅಬ್ದುಲ್ ಅಜೀಮ್ ರಂತಹ ದಕ್ಷರಿದ್ದಾರೆ. ಅವರನ್ನಾದರೂ ಮಾಡಿ. ಅಥವಾ ಮುಸ್ಲಿಮರು ಇಷ್ಟ ಇಲ್ಲ ಎಂದಾದರೆ ಒಬ್ಬ ಜೈನರನ್ನೋ, ಬೌದ್ಧರನ್ನೋ ಸಚಿವರನ್ನಾಗಿ ಮಾಡಿ” ಎಂದು ಇವರು ಆಗ್ರಹಿಸಿದರು.

Related Articles

Back to top button