ಅಲ್ ಅಮೀನ್ ಯಂಗ್-ಮೆನ್ಸ್ ಹಳೆಪೇಟೆ ಉಜಿರೆ ಇದರ ಅಧ್ಯಕ್ಷರಾಗಿ ಶಾಕೀರ್ ಆಯ್ಕೆ
ಬೆಳ್ತಂಗಡಿ : ಅಲ್ ಅಮೀನ್ ಯಂಗ್-ಮೆನ್ಸ್ ಹಳೆಪೇಟೆ ಉಜಿರೆ ಇದರ ಮಹಾಸಭೆ ಮದರಸ ಹಾಲಿನಲ್ಲಿ ಕೇಂದ್ರ ಕಮಿಟಿ ಅಧ್ಯಕ್ಷರಾಗಿರುವ ಬಿ.ಎಂ.ಅಬ್ದುಲ್ ಹಮೀದ್ ಹಾಜಿಯವರ ನೇತೃತ್ವದಲ್ಲಿ ಜರುಗಿತು. ಕೇಂದ್ರ ಕಮಿಟಿ ಪದಾಧಿಕಾರಿಗಳು ಅಲ್ ಅಮೀನ್ ಅಸೋಸಿಯೇಶನ್ ದಮ್ಮಾಮ್ ಜುಬೈಲ್ ರಿಯಾದ್ ಪಧಾದಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ರಹಿಮಾನ್ ರವರು ಸರ್ವರನ್ನು ಸ್ವಾಗತಿಸಿ 2017/ರಿಂದ 2021/ಸಾಲಿನ ವರದಿಯನ್ನು ಮಂಡಿಸಿದರು. ಹಳೆ ಕಮಿಟಿ ಬರ್ಕಸ್ ಮಾಡಿ ಹೊಸ ಕಮಿಟಿಯನ್ನು ನೇಮಕ ಮಾಡಲಾಯಿತು.
ಅಧ್ಯಕ್ಷರು:- ಶಾಕೀರ್
ಉಪಾಧ್ಯಕ್ಷರು:-ಹಂಝ M H , ಸವಾದ್ B H
ಕಾರ್ಯದರ್ಶಿ:-ಫಝಲ್ ರಹಿಮಾನ್ ಕೋಯ
ಜತೆ ಕಾರ್ಯದರ್ಶಿ:- ಸಲ್ಮಾನ್ SA
ಖಜಾಂಜಿ:-ರಹಿಮಾನ್
ಸಲಹೆಗಾರರಾಗಿ:- ಖಾದರ್ S.A ಹೆೃದರ್ ಕೂಟ್ರೋಡಿ ,ಹನೀಪ್ T H ,ಇಬ್ರಾಹಿಂ BH , ಸಲೀಂ U H ನೇಮಕ ಮಾಡಲಾಯಿತು.
ಅಲ್ ಅಮೀನ್ ಅಸೋಸಿಯೇಶನ್ ದಮ್ಮಾಮ್-ಜುಬೈಲ್ ಕಾರ್ಯದರ್ಶಿ ಹಳೇಕಮಿಟಿ ಸಾಧನೆಯನ್ನು ಶ್ಲ್ಯಾಘಿಸಿ ಹೊಸ ಕಮಿಟಿಗೆ ಗಲ್ಫ್ ಪ್ರವಾಸಿ ಸದಸ್ಯರ ಪರವಾಗಿ ಶುಭಕೋರಿದರು. ಯಂಗ್-ಮೆನ್ಸ್ ಮಾಜಿ ಅಧ್ಯಕ್ಷರಾದ ಸಿದ್ದೀಕ್ ವಾಫೀರ್ ರವರು ಅವರ ನೇತೃತ್ವವಧಿಯಲ್ಲಿ ಯಂಗ್ ಮೆನ್ಸ್ ಜತೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿ ಯಾವುದಾದರು ಲೋಪ ದೋಷ ಬಂದಲ್ಲಿ ಕ್ಪಮಿಸಬೇಕೆಂದು ಅಪೇಕ್ಸಿಸುತ್ತಾ ಹೊಸ ಕಮಿಟಿ ಅಭಿವೃದ್ಧಿಶೀಲತೆಯಲ್ಲಿ ಮುನ್ನುಗ್ಗಲಿ ಎಂದು ಶುಭಕೋರಿದರು.
ಕೇಂದ್ರ ಕಮಿಟಿ ಅಧ್ಯಕ್ಷರು ಸರ್ವ ಸದಸ್ಯರಿಗೆ ಸಲಹೆ,ನಿರ್ದೇಶನವನ್ನು ನೀಡಿ ಅಭಿನಂದನೆ ಕೋರಿದರು. ಕಮಿಟಿ ರಚನೆಗೆ ಸಹಕಾರ,ಹಾಗೂ ಕಾರ್ಯಕ್ರಮ ನಿರೂಪಣೆ ಸಾಹುಲ್ ನಿರ್ವಹಿಸಿದ್ದರು. ಸಿದ್ದೀಕ್ ವಾಪೀರ್ ರವರ ಧನ್ಯವಾದದೊಂದಿಗೆ ಸಭೆ ಮುಕ್ತಾಯಗೊಂಡಿತು.