ಕರಾವಳಿಮೂಡಬಿದ್ರಿ

ಅಲ್-ಮದರಸತುಲ್ ಅಸ್ರಾರುದ್ದೀನ್ ಕೈಕಂಬ ನೂತನ ಮದರಸ ಉದ್ಘಾಟನೆ

ಮೂಡಬಿದ್ರಿ : ಗುರುಪುರ ಕೈಕಂಬ ದ ಅಸ್ರಾರುದ್ದೀನ್ ಮಸೀದಿ ಕಟ್ಟಡದಲ್ಲಿ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಬ್ಯಾಸ ಬೋರ್ಡ್ ಇದರ ಅಧೀನ ದಲ್ಲಿ ನೂತವಾಗಿ ಅಲ್.ಮದರಸತುಲ್ ಆಸ್ರರುದ್ದೀನ್ ಆರಂಭಗೊಂಡಿತು. ನೂತನ ಮದರಸವನ್ನು ಗುರುಪುರ ರೇಂಜ್ ಜಮಿಯತುಲ್ ಮಹಲ್ಲಿಮಿನ್ ಅಧ್ಯಕ್ಷ ರಾದ ಜಮಲುದ್ದೀನ್ ದಾರಿಮಿ ಉದ್ಘಾಟಿಸಿದರು .ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕದ ವೇವಸ್ಥೆಯನ್ನು ಅಲ್.ಬಿರ್ರ್ ಸ್ಕೂಲ್ ಚೇರ್ಮನ್ ಆಸಿಫ್ ಆದರ್ಶ್ ಹಾಗೂ ಮದರಸ ಮ್ಯಾನೇಜಿಮೆಂಟ್ ಅಧ್ಯಕ್ಷ ರಾದ ನೌಶಾದ್ ಹಾಜಿ ಕೊಡುಗೆಯಾಗಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮದರಸದ ಅಧ್ಯಕ್ಷ ರಾದ ಮಾಮು ಮಳಲಿ ವಹಿಸಿದ್ದರು. ಶಾಹುಲ್ ಹಮೀದ್ ಹಾಜಿ ಮೆಟ್ರೋ,ಅಬೂಬಕ್ಕರ್ ಮಳಲಿ,ಮಹಮ್ಮದ್ ಕೊಝಿ, ಹಂಝ ಲತೀಪಿ, ಇಸ್ಮಾಯಿಲ್ ಹಾಜಿ ಡಿಲೆಕ್ಸ್, ಝಕಾರಿಯ ಹಾಜಿ ಅಡ್ಡೂರ್, M.G.ಭಾಷಾ, ರಿಯಾಜ್ ಮಿಲನ್, ಶೇಕಬ್ಬ ಹಾಜಿ ಸೆಲಿನ, ಅಸ್ರಾರುದ್ದೀನ್ ಮಸ್ಜಿದ್ ಇಮಾಮ್ ಇಂತಿಯಾಜ್ ರಾಝ್ವಿ ಹಾಗೂ ವಿದ್ಯಾರ್ಥಿಗಳ ಪೋಷಕರು,SKSSF ಕೈಕಂಬ ವಲಯದ ನಾಯಕರು ಬಾಗವಹಿಸಿದರು. ಮದರಸ ಸಮಿತಿಯ ಕಾರ್ಯದರ್ಶಿ ಅಹ್ಮದ್ ಹುಸೈನ್ ಸ್ವಾಗತಿದರು.SKSSF ಕೈಕಂಬ ವಲಯ ಕಾರ್ಯದರ್ಶಿ ಆರೀಫ್ ಕಮ್ಮಾಜೆ ಕಾರ್ಯಕ್ರಮ ನಿರ್ವಹಿಸಿದರು.

Related Articles

Back to top button