ಅಂಕಣಗಳು

ಆಟೋ ಚಾಲಕನ ಮಾನವೀಯತೆ… ಕಣ್ಣಾರೆ ಕಂಡ ಒಂದು ಘಟನೆ..

✍️ ಸಲ್ಮಾನ್ ಎಸ್.ಎ

ಉಜಿರೆಯಲ್ಲಿ ಇತೀಚಿನ 5-6 ದಿನಗಳ ಹಿಂದೆ 8:00-8:30pm ಸಮಯದಲ್ಲಿ ಒಬ್ಬ ಕುಡುಕನೋ ಅಥವ ಬುದ್ದಿ ಮಾಂದ್ಯನೋ ಅರಿಯದು, ಆತ ಹಲವು ಆಟೋ ಚಾಲಕರೊಂದಿಗೆ ಬಂದು ನನ್ನನ್ನು ನನ್ನ ಮನೆಯವರೆಗೆ ಬಿಟ್ಟು ಬಿಡಿ ದುಡ್ಡು ಮನೆಗೆ ಹೋದ ಬಳಿಕ ನೀಡುವೆನು ಅನ್ನುವಾಗ, ನನ್ನನ್ನು ಸೇರಿಸಿ ಹಲವು ಆಟೋ ಚಾಲಕರು ಆತ ದುಡ್ಡು ಕೊಡಲಾರಯೆಂದು ಮಾತನಾಡುತ್ತಿದ್ದರು

ಈ ಸಮಯದಲ್ಲಿ ಪಾರ್ಕಿಂಗ್ ಕಡೆ ಒಂದು ಆಟೋ ಬಂದದನ್ನು ವೀಕ್ಷಿಸಿ ನಾನು ಆ ಆಟೋದಲ್ಲಿ ಹೋಗಿ ಕುಳಿತುಕೊಂಡೆ….

ಆ ಆಟೋದಲ್ಲಿ ಆಟೋ ಚಾಲಕನೊಂದಿಗೆ ಕುಳಿತುಕೊಳ್ಳಲು ಹಲವಾರು ಜನರಿಗೆ ಬಹಳ ಸಂತೋಷ, ಯಾಕೆಂದರೆ ಆ ಆಟೋಚಾಲಕ ಎಲ್ಲರೊಂದಿಗೂ ಪ್ರೀತಿಯಿಂದ ಮುಗುಳು ನಗುತ್ತ, ಎಲ್ಲಾರ ಕಷ್ಟದಲ್ಲಿ ಬಾಗಿಯಾಗುವ ಓರ್ವ ವೀರ ಅನ್ನಬಹುದು…

ಆತನ ಆಟೋದಲ್ಲಿ ನಾನು ಕುಳಿತಿಕೊಂಡಿರುವ ಸಮಯದಲ್ಲಿ ಆ ಕುಡುಕನೋ ಅಥವ ಬುದ್ದಿ ಮಾಂದ್ಯನೋಯೆಂದು ಅರಿಯದ ವ್ಯೆಕ್ತಿ ಬಂದು ನನ್ನನ್ನು ನನ್ನ ಮನೆಯವರೆಗೂ ಬಿಟ್ಟು ಬಿಡಿಯೆಂದು ಹೇಳುತ್ತಾನೆ..

ಹಾಗೆಯೆ ಆ ವ್ಯಕ್ತಿಯೊಂದಿಗೆ ಬಹಳ ಸಮಾಧಾನದಿಂದ, ಪ್ರೀತಿಯಿಂದ ಕರೆದು ಮಾತನಾಡುತ್ತ, ಆಟೋ ಗೆ ಹತ್ತಿ ಕುಳಿತುಕೊಳ್ಳಲು ಹೇಳುತ್ತಾರೆ..

ಆ ವ್ಯೆಕ್ತಿ ಆಟೋದಲ್ಲಿ ಕುಳಿತುಕೊಂಡು ಹೇಳುವನು, “ಅಣ್ಣ ನನ್ನನ್ನು ಯಾರು ಕೂಡ ನನ್ನ ಮನೆಯವರೆಗೆ ಬಿಡುತ್ತಿಲ್ಲ, ನೀವಾದರೂ ನನ್ನನ್ನು ಬಿಡುವಿರಾಯೆಂದು ಕೇಳಿಕೊಳ್ಳುತ್ತಾನೆ”, ಆ ಸಂದರ್ಭದಲ್ಲಿ ನಾನು ಕೂಡ ಅದೇ ಆಟೋದಲ್ಲಿ ಕುಳಿತಿರುವೆನು…

ಆ ಆಟೋ ಚಾಲಕ ಆತನೊಂದಿಗೆ ಪ್ರೀತಿಯಿಂದ ಹೇಳಿದ ಮಾತಾಗಿರುತ್ತದೆ, “ನಿಮ್ಮನ್ನು ನಾನು ನಿಮ್ಮ ಮನೆಯವರೆಗೆ ಬಿಟ್ಟು ಬರಲು ನಿಮ್ಮನ್ನು ಕುಳಿತುಕೊಳ್ಳಲು ಹೇಳಿರುವೆನು” ಯೆಂದು ಆಟೋ ಚಾಲಕ ಹೇಳುವನು…

ಆಟೋ ಸ್ಟಾರ್ಟ್ ಮಾಡಿ ಆತನನ್ನು ಆತನ ಮನೆಯವರೆಗೆ ಬಿಟ್ಟ ಸಂದರ್ಭದಲ್ಲಿ ಆತ “ನಿಲ್ಲಿ ಮನೆಗೆ ಹೋಗಿ ದುಡ್ಡು ತರುವೆನು” ಯೆಂದು ಹೇಳುವಾಗ ಈ ಚಾಲಕ ಹೇಳಿದ ಮಾತಾಗಿರುತ್ತದೆ “ನೀವು ನನಗೆ ದುಡ್ಡು ಕೊಡುವುದು ಬೇಡ, ನೀವು ಸುರಕ್ಷಿತವಾಗಿ ಮನೆಗೆ ಹೋಗಿ” ಯೆಂದು…

ಆತನನ್ನು ಬಿಟ್ಟು ಹಿಂತಿರುಗಿ ಬರುವ ಸಮಯದಲ್ಲಿ ನಾನು ಕೇಳಿದೆ “ಅಲ್ಲ ನೀವು ಅವನ್ನನ್ನು ಯಾಕಾಗಿ ಬಿಟ್ಟು ಬಂದಿರಿ, ಆತ ಹೇಳುವುದು ಮಾತ್ರ ದುಡ್ಡು ತರುವೆಯೆಂದು ಅವನು ಹೋದರೆ ಬರುವುದಿಲ್ಲ” ನನ್ನ ಮಾತಿಗೆ ಅವರು ಬಹಳ ಖುಷಿ ಖುಷಿಯಿಂದ, ನಗು ನಗುತ್ತಾ ಹೇಳಿದರು, “ಅವನು ದುಡ್ಡು ಕೊಡುವುದಿಲ್ಲವೆಂದು ನನಗೂ ಗೊತ್ತಿದೆ, ಆದರೂ ಯಾರು ಕೂಡ ಹಾಗೆ ಬೆಕಂತನೆ ಮಾಡುವುದಿಲ್ಲ, ಅವರಿಗೆ ಅವರದೇ ಆದ ನೋವುಗಳು ಕಷ್ಟಗಳು ಇರಬಹುದು.. ನಾನು ಅವನ್ನನ್ನು ಅದಕ್ಕಾಗಿ ಬಿಟ್ಟು ಬಂದಿರುವೆನು” ಅನ್ನುತ್ತಾರೆ…

ಇಂತಹ ಒಬ್ಬ ಆಟೋ ಚಾಲಕ ನಮಗೆಲ್ಲರು ಸ್ಪೂರ್ತಿ, ಇಷ್ಟೆಲ್ಲ ಓದಿರುವ ನಿಮಗೆ ಅಂತಹ ಆಟೋ ಚಾಲಕ ಯಾರೆಂದು ಅನಿಸಬಹುದು… ಆ ಆಟೋ ಚಾಲಕನಾಗಿರುತ್ತಾನೆ ನಮ್ಮೆಲ್ಲ ಪ್ರೀತಿಗೆ ಪಾತ್ರರಾದ HAMZA M.H…

ನಿಜಕ್ಕೂ HAMZA M.H ಅನ್ನುವ ಹೆಸರು ಕೇಳದೆ ಇರುವವರು ಬಹಳ ವಿರಾಳ, ಆತ ನಮಗೆಲ್ಲರು ಮಾದರಿ…..

HAMZA M.H ನೀವು ನಿಮ್ಮ ಜೀವನದಲ್ಲಿ ಇನ್ನು ಹಲವಾರು ಮಾನವೀಯತೆ ಸೇವೆ ಹಾಗು ಸಮಾಜ ಸೇವೆ ಮಾಡುವ ಮೂಲಕ ನಮಗೆಲ್ಲರು ಮಾದರಿಯಾಗಿಯೆಂದು ಕೇಳಿಕೊಳ್ಳುತೇನೆ….

Back to top button