ಬಂಟ್ವಾಳ ಅ.27 : ಕಾರಿಂಜದಲ್ಲಿ ನಡೆದ ಅನೈತಿಕ ಪೊಲೀಸ್ ಗಿರಿ ವಿರುದ್ಧ ಕ್ಯಾಂಪಸ್ ಫ್ರಂಟ್ ಬಂಟ್ವಳ ವತಿಯಿಂದ ಬಿ. ಸಿ ರೋಡಿನ ಕೈಕಂಬದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನುದ್ದೇಶಿಸಿ ಮಾತನಾಡಿದ ರಾಜ್ಯ ಸಮಿತಿ ಸದಸ್ಯ ಫಹದ್ ಅನ್ವರ್ ಜಿಲ್ಲೆಯಲ್ಲಿ ಪೊಲೀಸರು ಸಂಘಪರಿವಾರ ಗೂಂಡಾಗಳ ಅನೈತಿಕ ಪೊಲೀಸ್ ಗಿರಿಗೆ ಕಡಿವಾಣ ಹಾಕದಿದ್ದಲ್ಲಿ ಇದರ ವಿರುದ್ಧ ಬೃಹತ್ ಜನ ಚಳುವಳಿಯು ಅನಿವಾರ್ಯಗಬಹುದು.ಅಲ್ಲದೆ ಈ ಸಂದರ್ಭ ಸಂತ್ರಸ್ತರು ಯಾವುದೇ ಬೆದರಿಕೆಗಳಿಗೆ ಹೆದರದೆ ಇವರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಬೇಕು ಎಂದು ಹೇಳಿದರು.
ಜಿಲ್ಲಾ ಮುಖಂಡರಾದ ರಿಯಾಜ್ ಅಂಕತಡ್ಕ ಮಾತನಾಡಿ ಕಾರಿಂಜದಲ್ಲಿ ನಡೆದ ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಹಾಗು ದುಷ್ಕರ್ಮಿಗಳ ವಿರುದ್ಧ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಮುಖಂಡೆ ಗೌಸಿಯಾ ಮಾತನಾಡಿದರು. ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷ ಅಶ್ಪಾಕ್, ಕಾರ್ಯದರ್ಶಿ ಐಮಾನ್, ರಿಫಾಝ್, ಮುಸ್ತಫಾ, ಸಫ್ವಾನ್ ಬಂಟ್ವಾಳ, ಹಾಯಿಝ್ ಫರಂಗಿಪೇಟೆ ಹಾಗೂ ಮತ್ತಿತರು ಉಪಸ್ಥಿತರಿದ್ದರು. ಹಂದಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.