ಕರಾವಳಿಮಂಗಳೂರು

ಕೊರೊನಾಪೀಡಿತ ದಂಪತಿ ನಗರ ಪೊಲೀಸ್ ಕಮೀಷನರ್​​ಗೆ ಕರೆ ಮಾಡಿ ಆತ್ಮಹತ್ಯೆ

ಮಂಗಳೂರು : ಕೊರೊನಾಪೀಡಿತ ದಂಪತಿ ನಗರ ಪೊಲೀಸ್ ಕಮೀಷನರ್​​ಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸುರತ್ಕಲ್​ನ ಚಿತ್ರಾಪುರದ ರಹೆಜಾ ಅಪಾರ್ಟ್​​ಮೆಂಟ್​​​ನಲ್ಲಿ ನಡೆದಿದೆ.ರಮೇಶ್ ಕುಮಾರ್ ಮತ್ತು ಗುಣ ಆತ್ಮಹತ್ಯೆ ಮಾಡಿಕೊಂಡ ದಂಪತಿ ಎಂದು ತಿಳಿದುಬಂದಿದೆ. ರಮೇಶ್ ಕುಮಾರ್​​ ಮುಂಜಾನೆ 6 ಗಂಟೆ ಸುಮಾರಿಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರಿಗೆ ಕರೆ ಮಾಡಿ ನಾವಿಬ್ಬರೂ ಕೊರೊನಾ ಪೀಡಿತರಾಗಿದ್ದೇವೆ. ನನ್ನ ಹೆಂಡತಿ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೀಗ ನಾನು ಕೂಡಾ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ‌. ನಮ್ಮ ಅಂತ್ಯಸಂಸ್ಕಾರ ಮಾಡಿ ಎಂದು ಮನವಿ ಮಾಡಿದ್ದರು.

ಕೂಡಲೇ ಪೊಲೀಸ್ ಕಮೀಷನರ್ ಆತನಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿರಲಿಲ್ಲ. ಆದರೆ ಪೊಲೀಸ್ ಕಮೀಷನರ್ ಆತನ ಜೀವ ಉಳಿಸಲು ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ನೀಡಿದ್ದರಲ್ಲದೆ, ಪೊಲೀಸ್ ಇಲಾಖೆಯ ಮೂಲಕವೂ ಆತನ ಪತ್ತೆಗೆ ಪ್ರಯತ್ನಿಸಿದ್ದಾರೆ. ಕೊನೆಗೆ ಆತನ ನಿವಾಸ ಪತ್ತೆಯಾದರೂ, ಅಷ್ಟರಲ್ಲಿ ಇಬ್ಬರು ನೇಣಿಗೆ ಶರಣಾಗಿದ್ದರು.

ರಮೇಶ್ ಕುಮಾರ್ ತನ್ನ ಆಪ್ತರಿಗೆ ಕಳುಹಿಸಿದ ವಾಯ್ಸ್ ಮೆಸೇಜ್​​ಗಳು ಪೊಲೀಸರಿಗೆ ಸಿಕ್ಕಿವೆ. ಇದರಲ್ಲಿ ‘ತನ್ನ ಹೆಂಡತಿ ಕೊರೊನಾದಿಂದ ಗಂಭೀರ ಸ್ಥಿತಿಯಲ್ಲಿದ್ದಾಳೆ. ನಾವಿಬ್ಬರೂ ಸಾಯಲು ನಿರ್ಧರಿಸಿದ್ದೇವೆ. ಹೆಂಡತಿ 40ಕ್ಕೂ ಅಧಿಕ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರೂ ಆಗಲಿಲ್ಲ. ಕೊನೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿಯೂ ಫ್ಯಾನ್​​ನಿಂದ ಬಟ್ಟೆ ತುಂಡಾಗಿ ಆಕೆ ಬಿದ್ದಳು. ಆಕೆ ಇದೀಗ ಸಾವನ್ನಪ್ಪಿದ್ದು ನಾನೂ ಸಾಯುತ್ತಿದ್ದೇನೆ.

Related Articles

Back to top button