ಕರಾವಳಿಮಂಗಳೂರು

ಕೋಮು ದ್ವೇಷಕ್ಕೆ ಕುಮ್ಮಕ್ಕು ನೀಡುವ ಶರಣ್ ಪಂಪ್‌ವೆಲ್‌ನನ್ನು ಗಡಿಪಾರು ಮಾಡಿ : ಜೇಡಿಎಸ್ ಸೇವಾದಳ ಜಿಲ್ಲಾಧ್ಯಕ್ಷ ನಝೀರ್ ಸಾಮಣಿಗೆ ಒತ್ತಾಯ

ಮಂಗಳೂರು: ಪ್ರವೀಣ್ ನೆಟ್ಟಾರ್ ಕೊಲೆಗೆ ಪ್ರತಿಕಾರವಾಗಿ ಸುರತ್ಕಲ್’ನಲ್ಲಿ ಫಾಝಿಲ್ ಕೊಲೆ ನಡೆಸಿದ್ದೇವೆ ಎಂದು ಸಂಘಪರಿವಾರದ ಅಂಗ ಸಂಘಟನೆಯಾದ ವಿಎಚ್’ಪಿ ನಾಯಕ ಶರಣ್ ಪಂಪ್‌ವೆಲ್ ನೀಡಿರುವ ಹೇಳಿಕೆ ಕೋಮು ದ್ವೇಷಕ್ಕೆ ಕುಮ್ಮಕ್ಕು ನೀಡುವಂತಿದೆ. ಅವನನ್ನು ಕೂಡಲೇ ಗಡಿಪಾರು ಮಾಡಬೇಕೆಂದು ದ.ಕ. ಜಿಲ್ಲಾ ಜೆಡಿಎಸ್ ಸೇವಾದಳ ಅಧ್ಯಕ್ಷ ನಝೀರ್ ಸಾಮಣಿಗೆ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಮುಂಬರುವ ಚುನಾವಣೆಯನ್ನು ಮುಂದಿಟ್ಟುಕ್ಕೊಂಡು ಸಾರ್ವಜನಿಕವಾಗಿ ವಿಷಕಾರಿ ಹೇಳಿಕೆಗಳನ್ನು ನೀಡಿ ಕೋಮುದ್ವೇಷಕ್ಕೆ ಕುಮ್ಮಕ್ಕು ಕೊಡುತ್ತಿದ್ದಾನೆ. ಕೆಲವು ಸಮಯಗಳಿಂದ ಶಾಂತಿಯುತವಾಗಿದ್ದ ಸಮಾಜದಲ್ಲಿ ವೀಷಬೀಜ ಬಿತ್ತಲಾಗುತ್ತಿದೆ. ಇಂತವರಿಗೆ ವೇದಿಕೆಗಳಲ್ಲಿ ಭಾಷಣ ನಿಷೇಧಿಸಿ ಗಡಿಪಾರು ಮಾಡಬೇಕಾಗಿದೆ.
ಕೋಡಲೇ ಜಿಲ್ಲಾಡಳಿತವು ಶರಣ್ ಪಂಪ್‌ವೆಲ್ ಮೇಲೆ ಸೂಕ್ತ ಕ್ರಮಗಳನ್ನು ತೆಗೆದು ಗಡಿಪಾರು ಮಾಡಬೇಕಾಗಿ ಒತ್ತಾಯಿಸಿದರು.

Related Articles

Back to top button