ಕರ್ನಾಟಕ

ಗಮನಿಸಿ : ಆ.15ರ ‘ಸ್ವಾತಂತ್ರ್ಯ ದಿನಾಚರಣೆ’ಯಂದು ‘ಪ್ಲಾಸ್ಟಿಕ್ ಧ್ವಜ’ ಮಾರಾಟಕ್ಕೆ ನಿಷೇಧ

ಹಾವೇರಿ : ರಾಜ್ಯ ಮಾಲಿನ್ಯ ನಿಂತ್ರಣ ಮಂಡಳಿಯು ಪರಿಸರ ಸಂರಕ್ಷಣೆಗಾಗಿ ಆಗಸ್ಟ್ 15 ರಂದು ಸ್ವಾತಂತ್ರ್ಯೋತ್ಸವ ದಿನಾಚರಣೆ ( Independence Day ) ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಪ್ಲಾಸ್ಟಿಕ್ ಧ್ವಜ ಮಾರಾಟ ಹಾಗೂ ಉಪಯೋಗಿಸದಂತೆ ಪರಿಸರ ಅಧಿಕಾರಿ ಎಂ.ಎಸ್.ಮಹೇಶ್ವರ ಅವರು ತಿಳಿಸಿದ್ದಾರೆ.

ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವಂತಹ ಅಂಗಡಿ ಮಾಲೀಕರುಗಳ ವಿರುದ್ಧ ಪ್ಲಾಸ್ಟಿಕ್ ಅಧಿನಿಯಮ-2016 ಹಾಗೂ ಪರಿಸರ ಸಂರಕ್ಷಣಾ ಕಾಯ್ದೆ, 1986ರಡಿಯಲ್ಲಿ ಕಾನೂನು ರೀತ್ಯಾ ಕ್ರಮಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪ್ರಯುಕ್ತ ಪ್ಲಾಸ್ಟಿಕ್ ಧ್ವಜಗಳ ಮಾರಾಟಮಾಡದಂತೆ ಹಾಗೂ ಉಪಯೋಗಿಸದಂತೆ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

Related Articles

Back to top button