ಕರ್ನಾಟಕ

‘ಗ್ಯಾರಂಟಿ’ಯಿಂದ ಕರ್ನಾಟಕದಲ್ಲಿ ಲೂಟಿಯಾಗಿದೆ, ಮಹಾರಾಷ್ಟ್ರದಲ್ಲಿ ಘೋಷಿಸಬೇಡಿ: ಕೇಂದ್ರ ಸಚಿವೆ ಮುಂದೆ ವ್ಯಕ್ತಿ ಆಕ್ರೋಶ

ಮೈಸೂರು: ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮುಂದೆಯೇ ವ್ಯಕ್ತಿಯೊಬ್ಬರು ಗ್ಯಾರಂಟಿಯಿಂದ ಕರ್ನಾಟಕದಲ್ಲಿ ಲೂಟಿಯಾಗಿದೆ. ಮಹಾರಾಷ್ಟ್ರದಲ್ಲಿ ಘೋಷಿಸಬೇಡಿ ಎಂಬುದಾಗಿ ಹೇಳಿದರು. ಈ ಮಾತು ಕೇಳಿದಂತ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಬ್ಬಿಬ್ಬಾದಂತ ಘಟನೆ ನಡೆದಿದೆ.

ಇಂದು ಮೈಸೂರು ನಗರದಲ್ಲಿ ಸಂಗೀತ ಉತ್ಸವದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ದಿಢೀರ್ ಎದ್ದಂತ ವ್ಯಕ್ತಿಯೊಬ್ಬರು ಮೇಡಂ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಯಿಂದ ಲೂಟಿಯಾಗುತ್ತಿದೆ. ದಯವಿಟ್ಟು ಮಹಾರಾಷ್ಟ್ರದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಬೇಡಿ ಎಂಬುದಾಗಿ ಆಗ್ರಹಿಸಿದರು.

ವ್ಯಕ್ತಿಯ ಈ ಮಾತು ಕೇಳಿದಂತ ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಕೆಲ ಕಾಲ ತಬ್ಬಿಬ್ಬಾದರು. ಕೂಡಲೇ ಸ್ಥಳದಲ್ಲಿದ್ದಂತ ಪೊಲೀಸರು ಆ ವ್ಯಕ್ತಿಯನ್ನು ಕಾರ್ಯಕ್ರಮದಿಂದ ಹೊರ ಕಳುಹಿಸಿದರು.

Related Articles

Back to top button