ಕರಾವಳಿ

ಡೀಸೆಲ್ ಕಳವು: ಆರು ಆರೋಪಿಗಳ ಬಂಧನ

ಬಂಟ್ವಾಳ: ಇಲ್ಲಿನ ಸೋರ್ಣಾಡು ಸಮೀಪ ಅರಳ ಗ್ರಾಮದ ಅರ್ಬ ನಿವಾಸಿ ಐವನ್ ಪಿಂಟೊ ಎಂಬುವರ ಜಮೀನಿನಲ್ಲಿ ಹಾದು ಹೋಗಿರುವ ಮಂಗಳೂರು-ಬೆಂಗಳೂರು ನಡುವಿನ ತೈಲ ಸರಬರಾಜು ಸಂಸ್ಥೆಗೆ ಸೇರಿದ ಡೀಸೆಲ್ ಪೂರೈಸುವ ಪೈಪ್ ಲೈನ್ ಗೆ ಕನ್ನ ಕೊರೆದು ಡೀಸೆಲ್ ಕಳವು ಮಾಡುವ ದಂಧೆಗೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆ ಪೊಲೀಸರು ಆರು ಆರೋಪಿಗಳನ್ನು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

ಇವರಿಂದ ಲಕ್ಷಾಂತರ ಮೌಲ್ಯದ ಡೀಸೆಲ್ ಕ್ಯಾನ್ ವಶಪಡಿಸಿಕೊಂಡಿರುವುದಾಗಿ ತಿಳಿದುಬಂದಿದೆ. ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್ ಮತ್ತು ಎಸ್‌ಐ ಪ್ರಸನ್ನ ಎಂ. ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಎನ್ನಲಾದ ಐವನ್ ಪಿಂಟೊ ಸಹಿತ ಹಲವರನ್ನು ವಶಕ್ಕೆ ಪಡೆದಿದ್ದಾರೆ. ದಂಧೆಯಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾದ ಹಲವಾರು ಮಂದಿ ತಲೆಮರೆಸಿ ಕೊಂಡಿರುವುದಾಗಿ
ಪೊಲೀಸ್ ಮೂಲಗಳು ತಿಳಿಸಿವೆ.

ಜುಲೈ 30ರಂದು ರಾತ್ರಿ ಸುಮಾರು 8 ಗಂಟೆಗೆ 15 ಅಡಿ ಆಳಕ್ಕೆ ಹಿಟಾಚಿ ಮೂಲಕ ಅಗೆದು ನೋಡಿದಾಗ ಪೈಪ್ ಲೈನ್ ಗೆ ಅಕ್ರಮವಾಗಿ ಕನ್ನ ಕೊರೆದು ಗೇಟ್ ವಾಲ್ ಮತ್ತು ಸ್ಟೀಲ್ ಕೋಟೆಡ್ ಪೈಪ್ ಅಳವಡಿಸಿ ಐವನ್ ಪಿಂಟೊ ಅವರ ಅಡಿಕೆ ತೋಟದ ಬಳಿ
ಗೇಟ್‌ವಾಲ್ ಅಳವಡಿಸಿರುವುದು ಪತ್ತೆಯಾಗಿತ್ತು.

Related Articles

Back to top button