ಕರಾವಳಿಮಂಗಳೂರು

ನಾಲ್ಕು ಮಂದಿ ಸಹೋದರು ಒಗ್ಗೂಡಿ 26 ಅಡಿಯ ಬಾವಿ ತೋಡಿ ಸಾಧನೆ

ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ

ಅಬ್ಬಬ್ಬಾ ‌…. ಒಂದಲ್ಲ ಎರಡಲ್ಲ ನೂರಾರು ದಿನದ ಲಾಕ್ ಡೌನ್ ರಜಾ ದಿನಗಳಲ್ಲಿ ಹಲವಾರು ಮಕ್ಕಳು ಅವರುಂಟು ಅವರ ಮೊಬೈಲ್ ಉಂಟು ಎಂಬಂತೆ ಮನೆಯೊಳಗಿಂದ ಹೊರಜಗತ್ತನ್ನು ಕಾಣಬಯಸಿದ್ದ ವಿದ್ಯಾರ್ಥಿಗಳನ್ನು ಆಶ್ಚರ್ಯ ಮಾಡುವಂತೆ ಇಲ್ಲೊಬ್ಬ ಸೋಮಂತಡ್ಕ ಮೂಲದ ಯುವ ಪ್ರತಿಭೆ ಸಫಾದ್ ಮನೆಯವರ ಕುಡಿನೀರಿಗೆ ಬೇಕಾಗಿ
ತನ್ನ ನಾಲ್ಕು ಮಂದಿ ಸಹೋದರನನ್ನು ಒಟ್ಟುಗೂಡಿಸಿ 26 ಅಡಿಯ ಬಾವಿ ತೋಡಿ ಸಾಧನೆಗೈದಿರುವನು

ದೈನಂದಿನ ನಡೆಯುತ್ತಿರುವ ಆನ್ಲೈನ್ ಕ್ಲಾಸ್ಗಳು ಇದರೆಡೆಯಲ್ಲಿ ಬಂದ ಎಸೆಸೆಲ್ಸಿ ಪರೀಕ್ಷೆಯನ್ನು ಕೂಡ ಬರೆಯುತ್ತ ಉಳಿದಿರುವ ಮಿಕ್ಕ ಸಮಯದಲ್ಲಿ ಈ ಭೀಮ ಕೆಲಸಕ್ಕೆ ಸಮಯ ವಿಟ್ಟು ಕಷ್ಟಪಟ್ಟಿರುವರು ಎಂಬುವುದು ಶ್ಲಾಘನೀಯ

ಈತ ಆರು ವರ್ಷಗಳಿಂದ ಪುತ್ತೂರು ಸಮೀಪದ ಮಾಡನ್ನೂರು ನೂರುಲ್ ಹುದಾ ವಿದ್ಯಾಸಂಸ್ಥೆಯಲ್ಲಿ ಧಾರ್ಮಿಕ ಮತ್ತು ಲೌಕಿಕ ವಿದ್ಯೆಯನ್ನು ಕಲಿಯುತ್ತಿರುವನು.

ಮನೆಯ ಹೊರಗಿಳಿಯದ ನಮ್ಮ ವಿದ್ಯಾರ್ಥಿಗಳಿಗೆ ಇವರು ಮಾದರಿಯಾಗಲಿ…..♥️

Related Articles

Back to top button