ಕರಾವಳಿಮಂಗಳೂರು

ನೂಕುನುಗ್ಗಲಿನಿಂದ ಗಲಿಬಿಲಿಗೊಂಡ ‘ಪದ್ಮಶ್ರೀ ಪುರಸ್ಕೃತ’ ಹರೇಕಳ ಹಾಜಬ್ಬ!

ಮಂಗಳೂರು: ರಾಷ್ಟ್ರಪತಿಯವರಿಂದ ಪದ್ಮಶ್ರೀ ಪುರಸ್ಕೃತಗೊಂಡು ಇಂದು ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅಕ್ಷರ ಸಂತ ಹರೇಕಳ ಹಾಜಬ್ಬನವರನ್ನು ಅಭಿನಂದಿಸಲು ನಡೆದ ನೂಕುನುಗ್ಗಲಾಟದಿಂದ ಗಲಿಬಿಲಿಗೊಂಡ ಹಾಜಬ್ಬನವರು ಅಲ್ಲಿಂದ ಓಟಕಿತ್ತ ಪ್ರಸಂಗ ನಡೆದಿದೆ.

ಹಾಜಬ್ಬನವರನ್ನು ಅಭಿನಂದಿಸುವ ಭರದಲ್ಲಿ ಹಾರ, ಶಾಲು, ಹೂಗುಚ್ಛಗಳನ್ನು ಹಿಡಿದು ನಾ ಮುಂದು ತಾ ಮುಂದು ಎಂದು ತಳ್ಳಾಟ ನಡೆಸಿದ್ದಾರೆ. ಆದರೆ ಯಾವುದೇ ಅಭಿನಂದನೆ, ಪ್ರಶಂಸೆಗೆ ಬಾಗದ, ಬೀಗದ ಹಾಜಬ್ಬನವರು ಇದರಿಂದ ಗಲಿಬಿಲಿಗೊಂಡು ಅಲ್ಲಿಂದ ಓಟಕಿತ್ತಿದ್ದಾರೆ.

ಆದರೂ ಅವರು ಕಾರಿನ ಬಳಿ ಬಂದರೂ ಬಿಡದ ಮತ್ತೆ ಮುತ್ತಿಗೆ ಹಾಕಿದ್ದಾರೆ. ಈ ಸಂದರ್ಭ ಅವರು ತಮಗೆಲ್ಲಾ ಇದೆಲ್ಲಾ ಯಾವುದೂ ಬೇಡ ಎಂದರೂ ಅವರಿಗೆ ಒತ್ತಾಯಪೂರ್ವಕವಾಗಿ ಹಾರ, ಶಾಲು, ಹೂಗುಚ್ಛಗಳನ್ನು ನೀಡಿರುವ ಘಟನೆ ನಡೆದಿದೆ. ಬಳಿಕ ಪೊಲೀಸರು ಅವರನ್ನು ಹರಸಾಹಸಪಟ್ಟು ಕಾರಿನಲ್ಲಿ ಕೂರಿಸಿ ಕಳುಹಿಸಿಕೊಟ್ಟಿದ್ದಾರೆ‌.

Related Articles

Back to top button