ಬಂಟ್ವಾಳ : ಸ್ಕೂಟರ್ ಗೆ ಲಾರಿ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಮೃತಪಟ್ಟ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಬುಡೋಳಿ ಎಂಬಲ್ಲಿ ಅ.12 ರ ಗುರುವಾರ ಮಧ್ಯಾಹ್ನ ವೇಳೆ ನಡೆದಿದೆ. ಕನ್ಯಾನ ಪರಕಜೆ ನಿವಾಸಿ ಮಂಜು ಬೆಳ್ಚಾಡ ಅವರ ಪುತ್ರ ಗಣೇಶ್ ಬಂಗೇರ (54) ಮೃತಪಟ್ಟ ವ್ಯಕ್ತಿ.
ಉಪ್ಪಿನಂಗಡಿ ಕಡೆಗೆ ವೈಯಕ್ತಿಕ ಕೆಲಸದ ನಿಮಿತ್ತ ದ್ವಿಚಕ್ರ ವಾಹನದ ಮೂಲಕ ಸಂಚರಿಸುವ ವೇಳೆ ಬುಡೋಳಿ ಎಂಬಲ್ಲಿ ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ.ಅಪಘಾತದ ರಭಸಕ್ಕೆ ಸಂಪೂರ್ಣ ಲಾರಿಯ ಅಡಿಯಲ್ಲಿ ಸಿಲುಕಿ ಕೊಂಡಿತ್ತು.ಸ್ಕೂಟರ್ ಸವಾರ ಲಾರಿಯ ಅಡಿಯಲ್ಲಿ ಸಿಲುಕಿಕೊಂಡಿದ್ದು , ಮಾಣಿ ಸೋಶಿಯಲ್ ಇಕ್ವಾ ಫೆಡರೇಶನ್ ಇದರ ಕಾರ್ಯ ಕರ್ತರಾದ ಶರೀಫ್, ಸಂಶೀರ್ ಬುಡೋಳಿ ಹಾಗೂ ಅಟೋ ಚಾಲಕ ಇಕ್ಬಾಲ್ ಅವರು ಕೂಡಲೇ ಸ್ಥಳ ಕ್ಕೆ ಧಾವಿಸಿ ಇಕ್ವಾ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆ ಗೆ ಸಾಗಿಸಿದರೂ ಬದುಕುಳಿಯಲಿಲ್ಲ. ಅದಾಗಲೇ ಅವರು ಮೃತಪಟ್ಟ ಬಗ್ಗೆ ವೈದ್ಯ ರು ದೃಢಪಡಿಸಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ವಿಟ್ಲ ಪೋಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಹೆಚ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.