ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್(ರಿ) ವತಿಯಿಂದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ಬೃಹತ್ ರಕ್ತದಾನ ಶಿಬಿರ
ಮಂಗಳೂರು : ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ ) ಸಂಸ್ಥೆಯ ವತಿಯಿಂದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ಬೃಹತ್ ರಕ್ತದಾನ ಶಿಬಿರವನ್ನು ಬಂದರ್ ರಸ್ತೆಯಲ್ಲಿ ಎ.ಜೆ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಅಭೂತಪೂರ್ವವಾದ ಯಶಸ್ವಿ ಕಂಡಿತು.
ಈ ಶಿಬಿರವನ್ನು ಮಂಗಳೂರಿನ ಕೇಂದ್ರ ಮಸೀದಿಯ ಧರ್ಮ ಗುರುಗಳಾದ ಅಕ್ರಮ್ ಬಾಖವಿಗಳವರ ದುಆಶೀರ್ವಚನೆಯೊಂದಿಗೆ ಆರಂಭಿಸಲಾಯಿತು . ಕಳೆದು ಹೋದ ಮಹಾನ್ ವ್ಯಕ್ತಿಗಳ ಚರ್ಯೆಯನ್ನು ನೆನಪಿಸಿ ಇನ್ನೂ ಕೂಡಾ ಇಂತಹ ಸಮಾಜ ಕ್ಕೆ ಒಳಿತಾಗುವ ಕಾರ್ಯಕ್ರಮ ಮಾಡಲು ಸರ್ವಶಕ್ತನು ಅನುಗ್ರಹಿಸಲಿ ಎಂದು ಆಶೀರ್ವಧಿಸಿದರು. ಅತಿಥಿ ಗೊಳಲ್ಲೊಬ್ಬರಾದ ಅಡ್ವೊಕೇಟ್ ಮುಹಮ್ಮದ್ ಹನೀಫ್ ಮಾತನಾಡಿ ಹಿಂದೂ ಮುಸ್ಲಿಂ ಕ್ರೈಸ್ತ ರೆಲ್ಲಾ ಒಂದೇ , ಎಲ್ಲಾ ಮನುಷ್ಯರೂ ಅವರು ವಸ್ತ್ರಗಳಿಂದ ಬೇರೆ ಬೇರೆ ಆದರೂ ಒಳಗಿಂದ ಒಂದೇ , ಎಲ್ಲರ ರಕ್ತ ಇತರ ಶರೀರದ ಭಾಗಗಳು ಒಂದೇ ,ಎಲ್ಲಕ್ಕಿಂತಾ ಬಹಳ ಪುಣ್ಯವಾದ ದಾನಗಳಲ್ಲಿ ಮೊದಲು ಬರುವುದು ರಕ್ತದಾನವೆಂದು ಹೇಳಿದರು .
ಸ್ವ್ತಾತಂತ್ರೋತ್ಸವದ ಆಚರಣೆ ಯಂತೆ ಕೊಠಡಿ ಯನ್ನು ಅಲಂಕರಿಸಲಾಗಿತ್ತು , ಪ್ರವೇಶದ್ವಾರವು ತಿರಂಗಾದ ಬಲೂನ್, ಬಟ್ಟೆಗಳಿಂದ ರಾರಾಜಿಸುತ್ತಿತ್ತು. ಕೇವಲ 25 ಜನ ಸ್ನೇಹಿತರಿಂದ ರೂಪುಗೊಂಡ, ತುಂಬಾ ಕಷ್ಟದಲ್ಲಿರುವ ಅಶಕ್ತ ರೋಗಿಗಳಿಗೆ ಹಣ ಸಹಾಯ ಮಾಡುವ ಉದ್ದೇಶದಿಂದ ರೂಪುಗೊಂಡ ಈ ಸಂಘಟನೆಯು ಪ್ರಪ್ರಥಮ ಬಾರಿಗೆ ಶಿಬಿರವನ್ನು ಸಂಘಟಿಸಿತು.